Mysore
18
few clouds

Social Media

ಮಂಗಳವಾರ, 27 ಜನವರಿ 2026
Light
Dark

ಗಣರಾಜ್ಯೋತ್ಸವ : ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ

ಭುಗಿಲೆದ್ದ ಆಕ್ರೋಶ; ಬಿಜೆಪಿ -ಕಾಂಗ್ರೆಸ್ ಆರೋಪ-ಪ್ರತ್ಯಾರೋಪ

ಬೆಂಗಳೂರು : ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಬಾರಿ ಹೊಸದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಕರ್ನಾಟಕದಿಂದ ‘ಮಿಲೆಟ್ಸ್ ಟು ಮೈಕ್ರೋಚಿಪ್’ (ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ) ಎಂಬ ಪರಿಕಲ್ಪನೆಯ ಸ್ತಬ್ಧಚಿತ್ರವನ್ನು ಸಿದ್ಧಪಡಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಪರೇಡ್‌ನಿಂದ ಹೊರಬಿದ್ದಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ.

ಮಿಲೆಟ್ಸ್ ಟು ಮೈಕ್ರೋ ಚಿಪ್’ ವಿಷಯಾಧಾರಿತ ಸ್ತಬ್ಧ ಚಿತ್ರ
ಆತ್ಮನಿರ್ಭರ ಭಾರತಕ್ಕೆ ಸಿರಿಧಾನ್ಯದಿಂದ ತಂತ್ರಜ್ಞಾನದವರೆಗೆ ವಿಷಯಾಧಾರಿತ ಸ್ತಬ್ಧ ಚಿತ್ರ ಸಿದ್ಧಪಡಿಸಲಾಗಿತ್ತು. ಮಿಲೆಟ್ಸ್ ಟು ಮೈಕ್ರೋಚಿಪ್ ಸ್ತಬ್ಧಚಿತ್ರದ ಮೂಲಕ ಕರ್ನಾಟಕದ ಬೆಳೆಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆ ಹಾಗೂ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆಯೂ ಟ್ಯಾಬ್ಲೋದಲ್ಲಿ ನಿರ್ಮಿಸಲಾಗಿತ್ತು.

ಕರ್ನಾಟಕವು ಕೃಷಿ ಕೈಗಾರಿಕೆ, ನಾವೀನ್ಯತೆ ಮತ್ತು ಸಂಸ್ಕ ತಿಯಲ್ಲಿ ಸಮತೋಲಿತ ಪ್ರಗತಿ ಮೂಲಕ ರಾಷ್ಟ್ರವನ್ನು ಸಮೃದ್ಧ ಮತ್ತು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುತ್ತಿದೆ. ಆತ್ಮನಿರ್ಭರ ಭಾರತದ ದೃಷ್ಟಿಗೆ ಕರ್ನಾಟಕ ಸಮಗ್ರ ಕೊಡುಗೆ ನೀಡುತ್ತಿದೆ ಎಂಬುದು ಈ ಸ್ತಬ್ಧಚಿತ್ರದ ಸಂಕೇತವಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಈ ಸ್ತಬ್ಧಚಿತ್ರ ಪ್ರದರ್ಶಿಸುವ ಪ್ರಸ್ತಾಪ ಅಂಗೀಕೃತವಾಗದ ಹಿನ್ನೆಲೆಯಲ್ಲಿ ದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.

ಸರಿಯಾದ ಪತ್ರ ವ್ಯವಹಾರ ನಡೆದಿಲ್ಲ : ಯದುವೀರ್
ಈ ಬಗ್ಗೆ ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುತ್ತಿಲ್ಲ. ಸರಿಯಾಗಿ ಪತ್ರ ವ್ಯವಹಾರ ನಡೆದಿಲ್ಲ, ಹಾಗಾಗಿ ಗೊಂದಲ ಆಗಿತ್ತು. ಈ ಬಾರಿ ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರ ಇರುವುದಿಲ್ಲ ಎಂದು ಕಾರಣ ಕೊಟ್ಟಿದ್ದಾರೆ.

ಪ್ರದೀಪ್ ಈಶ್ವರ್ ಆಕ್ರೋಶ
ಕರ್ನಾಟಕದ ಪ್ರತಿಯೊಬ್ಬ ಮತದಾರು ಸೂಕ್ಷ್ಮವಾಗಿ ಯೋಚಿಸಬೇಕು. ಬಿಜೆಪಿಗೆ ಮತ ಹಾಕಿದವರು ಯೋಚನೆ ಮಾಡಿ. ನಾಲಾಯಕ್ ಸಂಸದರು ನೋಡಬೇಕಿದೆ. ರಾಜ್ಯದ ಪರ ಧ್ವನಿ ಎತ್ತದ ಸಂಸದರೇ ನೋಡಿ. ದಿಲ್ಲಿ ಪರೇಡ್‌ನಲ್ಲಿ 30 ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗಿದೆ. 17 ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಹೋಗುತ್ತವೆ. ಕೇರಳದ ಟ್ಯಾಬ್ಲೋ ಹೋಗ್ತಿದೆ. ಯಾಕಂದ್ರೆ ಚುನಾವಣೆ ಇದೆ. ತಮಿಳುನಾಡಿನಲ್ಲಿ ಚುನಾವಣೆ ಇದೆ ಅದರದ್ದು ಸಹ ಹೋಗುತ್ತಿದೆ. ಪುದುಚೇರಿಯಲ್ಲು ಚುನಾವಣೆ ಇದೆ. ಅಲ್ಲಿ ಚುನಾವಣೆಗಳು ಇರುವುದಿರಂದ ಈ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ಟ್ಯಾಬ್ಲೋಗೆ ಅವಕಾಶ ಸಿಕ್ಕಿಲ್ಲ. ಇದಾ ನೀವು ರಾಜ್ಯಕ್ಕೆಕೊಡುವ ಗೌರವ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!