Mysore
26
broken clouds

Social Media

ಸೋಮವಾರ, 26 ಜನವರಿ 2026
Light
Dark

ಗಣರಾಜ್ಯೋತ್ಸವ ಸಂಭ್ರಮ | ಕರ್ತವ್ಯಪಥದಲ್ಲಿ ಸೇನಾ ಶಕ್ತಿಯ ಅನಾವರಣ

ಹೊಸದಿಲ್ಲಿ : 77ನೇ ಗಣರಾಜ್ಯೋತ್ಸವದ ಅಂಗವಾಗಿ ದಿಲ್ಲಿಯ ಕರ್ತವ್ಯ ಪಥದಲ್ಲಿ ಭಾರತವು ಸಾಂಸ್ಕೃತಿಕ ವೈವಿಧ್ಯತೆಯೊಂದಿಗೆ ದೇಶದ ಸೇನಾ ಶಕ್ತಿ ಪ್ರದರ್ಶನ ನಡೆದಿದೆ. ಜೊತೆಗೆ ಆಪರೇಷನ್‌ ಸಿಂಧೂರ್‌ ಟ್ಯಾಬ್ಲೋ ಪ್ರದರ್ಶನ, ಸೇನೆಯ ಡ್ರೋನ್‌ಗಳ ಸಹ ಕಾಣಿಸಿಕೊಂಡಿವೆ.

ಪರೇಡ್‌ನಲ್ಲಿ ಭಾರತೀಯ ಸೇನೆಯು ಮೊದಲ ಬಾರಿಗೆ “ಫೇಸ್ಡ್ ಬ್ಯಾಟಲ್ ಅರೇ” ಫಾರ್ಮ್ಯಾಟ್‌ನಲ್ಲಿ ತನ್ನ ಆಧುನಿಕ ಯುದ್ಧ ಸಾಮರ್ಥ್ಯವನ್ನು ಪ್ರದರ್ಶಿಸಿತು. ಇದರಲ್ಲಿ ಡ್ರೋನ್‌ಗಳು, ಕೌಂಟರ್-ಡ್ರೋನ್ ಸಿಸ್ಟಮ್‌ಗಳು ಮತ್ತು ಇತರ ಆಧುನಿಕ ತಂತ್ರಜ್ಞಾನಗಳು ಪ್ರಮುಖ ಆಕರ್ಷಣೆಯಾದವು. ಸೇನಾ ಶಸ್ತ್ರಾಸ್ತ್ರಗಳಲ್ಲಿ ಬ್ರಹ್ಮೋಸ್, ಸೂಪರ್‌ಸಾನಿಕ್ ಕ್ರೂಸ್ ಮಿಸೈಲ್, ಆಕಾಶ್, ಏರ್ ಡಿಫೆನ್ಸ್ ಸಿಸ್ಟಮ್, ಎಸ್-400, ಏರ್ ಡಿಫೆನ್ಸ್ ಸಿಸ್ಟಮ್, ಸೂರ್ಯಾಸ್ತ್ರ ಯೂನಿವರ್ಸಲ್ ರಾಕೆಟ್ ಲಾಂಚರ್ ಸಿಸ್ಟಮ್, ಅರ್ಜುನ್, ಮುಖ್ಯ ಯುದ್ಧ ಟ್ಯಾಂಕ್ (Mk-1A), ಟಿ-90 ಭೀಷ್ಮ ಟ್ಯಾಂಕ್‌ಗಳು, ನಾಗ್ ಮಿಸೈಲ್ ಸಿಸ್ಟಮ್ ಮತ್ತು ಇತರ ಆಯುಧಗಳು ಪ್ರದರ್ಶನಗೊಂಡವು.

ಮೊದಲ ಬಾರಿಗೆ ಶಕ್ತಿಬಾನ್ ಮತ್ತು ದಿವ್ಯಾಸ್ತ್ರ ಡ್ರೋನ್-ಕೇಂದ್ರಿತ ಆರ್ಟಿಲರಿ ಯೂನಿಟ್‌ಗಳು, ಭೈರವ್ ಲೈಟ್ ಕಮಾಂಡೋ ಬ್ಯಾಟಾಲಿಯನ್ ಪ್ರದರ್ಶನಗೊಂಡವು. ತ್ರಿಸೇನಾ ಟ್ಯಾಬ್ಲೋ “ಆಪರೇಷನ್ ಸಿಂದೂರ್”ಅನ್ನು ಏಕೀಕೃತ ಶಕ್ತಿಯ ಸಂಕೇತವಾಗಿ ತೋರಿಸಲಾಯಿತು. ಇದು ಭಾರತದ ಜಾಯಿಂಟ್‌ನೆಸ್ (ಸಂಯುಕ್ತತೆ), ಆತ್ಮನಿರ್ಭರತಾ ಮತ್ತು ಇನ್ನೋವೇಷನ್‌ನ ಸಂದೇಶವನ್ನು ಒತ್ತಿಹೇಳಿತು. ಇದರಲ್ಲಿ ಡ್ರೋನ್ ಶಕ್ತಿ, ಏರ್ ಡಿಫೆನ್ಸ್ ಮತ್ತು ಇಲೆಕ್ಟ್ರಾನಿಕ್ ವಾರ್‌ಫೇರ್ ಸಾಮರ್ಥ್ಯಗಳನ್ನು ಎತ್ತಿ ತೋರಿಸಲಾಯಿತು.

ಭಾರತೀಯ ವಾಯುಪಡೆಯ ರಫೇಲ್, ಸು-30 ಮತ್ತು ಇತರ ಜೆಟ್‌ಗಳೊಂದಿಗೆ ವಿಜಯ್ ಮತ್ತು ವಜ್ರಾಂಗ್ ಫ್ಲೈಪಾಸ್ಟ್ ಅತ್ಯಂತ ರೋಮಾಂಚಕರವಾಗಿತ್ತು. ನೌಕಾಪಡೆ ಮತ್ತು ವಾಯುಪಡೆಯ ಮಾರ್ಚಿಂಗ್ ಕಂಟಿನ್ಜೆಂಟ್‌ಗಳು ಸಹ ಪ್ರಭಾವಿ ಪ್ರದರ್ಶನ ನೀಡಿದವು. 23ಕ್ಕೂ ಹೆಚ್ಚು ರಾಜ್ಯಗಳ ಸಾಂಸ್ಕೃತಿಕ ಟ್ಯಾಬ್ಲೋಗಳು, 2,500ಕ್ಕೂ ಹೆಚ್ಚು ಕಲಾವಿದರ ಭಾಗವಹಿಸುವಿಕೆಯೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ಯುರೋಪಿಯನ್ ಯೂನಿಯನ್‌ನ ಮಿಲಿಟರಿ ಕಂಟಿನ್ಜೆಂಟ್ ಸಹ ವಿಶೇಷ ಅತಿಥಿಯಾಗಿ ಭಾಗವಹಿಸಿತು.

 

Tags:
error: Content is protected !!