Mysore
21
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಗಣರಾಜ್ಯೋತ್ಸವ-2025: 942 ಪೊಲೀಸ್‌ ಸಿಬ್ಬಂದಿಗೆ ಶೌರ್ಯ, ಸೇವಾ ಪದಕ ಘೋಷಣೆ

ನವದೆಹಲಿ: 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಅಗ್ನಿಶಾಮಕ, ನಾಗರೀಕ ರಕ್ಷಣೆ ಸೇರಿ ಒಟ್ಟು 942 ಪೊಲೀಸ್‌ ಸಿಬ್ಬಂದಿಗೆ ವಿವಿಧ ಶೌರ್ಯ ಹಾಗೂ ಸೇವಾ ಪದಕಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಕೇಂದ್ರ ಸರ್ಕಾರವೂ ಇಂದು(ಜನವರಿ.25) ಅಧಿಕೃತವಾಗಿ ಘೋಷಣೆ ಹೊರಡಿಸಿದ್ದು, ಇದರಲ್ಲಿ 95 ಶೌರ್ಯ ಪ್ರಶಸ್ತಿಗಳಿವೆ. ಅಲ್ಲದೇ ಪದಕ ಪುರಸ್ಕೃತರಲ್ಲಿ ವೈಯಕ್ತಿಕ ಸಿಬ್ಬಂದಿ, ಅಗ್ನಿಶಾಮಕ, ಹೋಮ್‌ ಗಾರ್ಡ್‌ ಹಾಗೂ ನಾಗರೀಕ ಸೇವಾ ಸಿಬ್ಬಂದಿ ಸೇರಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಈ ಪ್ರಶಸ್ತಿಯಲ್ಲಿ ತಲಾ 28 ಜನ ಎಡಪಂಥೀಯ ತೀವ್ರಗಾಮಿ ಹೋರಾಟಗಾರರು ಇರುವ ಪ್ರದೇಶದಲ್ಲಿ ಹಾಗೂ ಜಮ್ಮು ಮತ್ತು ಕಾಶ್ಮೀರ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರು. ಈಶಾನ್ಯ ಭಾರತದ ಮೂರು ಜನ ಹಾಗೂ ಉಳಿದ 26 ಜನ ದೇಶದ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದೆ.

ಇನ್ನೂ 101 ಜನರಿಗೆ ರಾಷ್ಟ್ರಪತಿ ಪದಕ, 85 ಜನ ಪೊಲೀಸ್‌ ಸಿಬ್ಬಂದಿ, 5 ಜನ ಅಗ್ನಿಶಾಮಕ ಸಿಬ್ಬಂದಿ, 7 ನಾಗರೀಕ ಸೇವಾ ಸಿಬ್ಬಂದಿ, ಹೋಮ್‌ಗಾರ್ಡ್‌ಗಳು ಹಾಗೂ 4 ಇತರೆ ಸಿಬ್ಬಂದಿಗಳಿದ್ದಾರೆ. ಜೊತೆಗೆ 746 ಸೇವಾ ಪದಕಗಳ ಪೈಕಿ, 37 ಅಗ್ನಿಶಾಮಕ, 39 ನಾಗರೀಕ ರಕ್ಷಣಾ, 634 ಪೊಲೀಸ್‌, ಹೋಮ್‌ಗಾರ್ಡ್‌ ಹಾಗೂ 36 ಇತರೆ ಸಿಬ್ಬಂದಿಗಳಿಗೆ ವಿತರಿಸಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

Tags: