Mysore
16
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಖ್ಯಾತ ನಟ ಕಮಲ್‌ ಹಾಸನ್‌ ರಾಜ್ಯಸಭೆ ಪ್ರವೇಶ.?

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ಎಂಎನ್‍ಎಂ ನಾಯಕ ಕಮಲ್ ಹಾಸನ್, ಡಿಎಂಕೆ ಜೊತೆ ಚುನಾವಣಾ ಒಪ್ಪಂದ ಮಾಡಿಕೊಂಡ ನಂತರ ರಾಜ್ಯಸಭೆಗೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಪಿಎಂಕೆ ಸಂಸದ ಅನ್ಬುಮಣಿ ರಾಮದಾಸ್ ಅವರಿಗೆ ಯಾವುದೇ ದೊಡ್ಡ ದ್ರಾವಿಡ ಪಕ್ಷಗಳ ಬೆಂಬಲವಿಲ್ಲದ ಕಾರಣ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಮುಂಬರುವ ರಾಜ್ಯಸಭಾ ಚುನಾವಣೆಗಳು ತಮಿಳುನಾಡಿನಲ್ಲಿ ಗಮನಾರ್ಹ ರಾಜಕೀಯ ಸಂಚಲನವನ್ನು ಸೃಷ್ಟಿಸುತ್ತಿವೆ. ಡಿಎಂಕೆ ಮತ್ತು ಎಐಎಡಿಎಂಕೆ ಕ್ರಮವಾಗಿ ನಾಲ್ಕು ಮತ್ತು ಎರಡು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ರಾಜ್ಯಸಭಾ ಚುನಾವಣೆ ಜೂನ್.19ರಂದು ನಡೆಯಲಿದ್ದು, ಮತಗಳ ಎಣಿಕೆ ಅದೇ ದಿನ ಸಂಜೆ 5 ಗಂಟೆಗೆ ನಡೆಯಲಿದೆ. ಎಂ ಷಣ್ಮುಗಂ, ಎಂ ಮೊಹಮದ್ ಅಬ್ದುಲ್ಲಾ ಮತ್ತು ಪಿ ವಿಲ್ಸನ್ (ಎಲ್ಲರೂ ಡಿಎಂಕೆ), ವೈಕೊ (ಎಂಡಿಎಂಕೆ) ಮತ್ತು ಅನ್ಬುಮಣಿ ಅವರ ಅವಧಿ ಮುಗಿದ ನಂತರ ಚುನಾವಣೆ ನಡೆಸಬೇಕಾಗಿದೆ.

2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಡಿಎಂಕೆ ನಾಯಕತ್ವದೊಂದಿಗೆ ನಡೆದ ಚುನಾವಣಾ ಒಪ್ಪಂದದಿಂದಾಗಿ ಕಮಲ್ ಹಾಸನ್ ರಾಜ್ಯಸಭಾ ಸದಸ್ಯರಾಗಲು ಸಜ್ಜಾಗಿದ್ದಾರೆ. ಅವರ ಪಕ್ಷ ಎಂಎನ್‍ಎಂ ಅವರ ಉಮೇದುವಾರಿಕೆಯನ್ನು ಅಧಿಕೃತಗೊಳಿಸಲು ಸಿದ್ಧತೆ ನಡೆಸುತ್ತಿದೆ.

ಕಮಲ್ ಹಾಸನ್ ನೇತೃತ್ವದ ಎಂಎನ್‍ಎಂನ ಕೇಂದ್ರ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಬುಧವಾರ ಅಥವಾ ಗುರುವಾರ ಸಭೆ ಸೇರಿ ಅವರ ಉಮೇದುವಾರಿಕೆಯನ್ನು ಅನುಮೋದಿಸುತ್ತದೆ ಎಂದು ಎಂಎನ್‍ಎಂ ನಾಯಕರೊಬ್ಬರು ಹೇಳಿದ್ದಾರೆ.

Tags:
error: Content is protected !!