ನವದೆಹಲಿ: ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 24 ರೂ ಕಡಿಮೆ ಮಾಡಿವೆ. ಬೆಲೆ ಕಡಿತದ ಬಳಿಕ ಸಿಲಿಂಡರ್ ಬೆಲೆ 1,723 ರೂ.ಆಗಿದೆ. ಪರಿಷ್ಕ್ರತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
ಗೃಹ ಬಳಕೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದಿನಿಂದ 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ 24 ರೂ.ಗಳಷ್ಟು ಕಡಿತವಾಗಿದೆ.
ಸ್ಥಳೀಯ ತೆರಿಗೆಗಳು ಹಾಗೂ ಸಾಗಾಣಿಕೆ ವೆಚ್ಚವನ್ನು ಆಧರಿಸಿ, ರಾಜ್ಯದಿಂದ ರಾಜ್ಯಕ್ಕೆ ಅನಿಲ ಸಿಲಿಂಡರ್ಗಳ ದರದಲ್ಲಿ ವ್ಯತ್ಯಯವಾಗುತ್ತದೆ. ದೇಶದಲ್ಲಿ ಶೇ.90 ರಷ್ಟು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಗೃಹೋಪಯೋಗಕ್ಕೆ ಬಳಸಲಾಗುತ್ತಿದ್ದು, ಶೇ.10ರಷ್ಟು ಅನಿಲವನ್ನು ಮಾತ್ರ ವಾಣಿಜ್ಯ, ಕೈಗಾರಿಕೆ ಹಾಗೂ ವಾಹನಗಳಿಗಾಗಿ ಬಳಸಲಾಗುತ್ತಿದೆ.
ಇಂಡಿಯನ್ ಆಯಿಲ್ ಹೊರಡಿಸಿದ ಹೊಸ ದರದ ಪ್ರಕಾರ, 19 ಕೆಜಿ ಎಲ್‍ಪಿಜಿ ಸಿಲಿಂಡರ್ ಈಗ ದೆಹಲಿಯಲ್ಲಿ 1723.50 ರೂ.ಗೆ ಲಭ್ಯವಿರುತ್ತದೆ. ಮೊದಲು ಇದು 1747.50 ರೂ.ಗೆ ಲಭ್ಯವಿತ್ತು. ಇಂದಿನಿಂದಲೇ 24 ರೂಪಾಯಿಗಳಷ್ಟು ಅಗ್ಗವಾಗಿದೆ. ಇಂದಿನಿಂದ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ 1851.50 ರೂ. ಬದಲಿಗೆ 1826 ರೂ.ಗೆ ಲಭ್ಯವಿರುತ್ತದೆ.





