Mysore
26
overcast clouds

Social Media

ಗುರುವಾರ, 07 ಮೇ 2026
Light
Dark

ಬೇಳೆ ಬೆಲೆ ಇಳಿಕೆಗೆ ಕ್ರಮ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ನವದೆಹಲಿ: ಕಡಲೆ, ತೊಗರಿ, ಉದ್ದಿನ ಬೇಳೆಕಾಳುಗಳ ಬೆಲೆ ಇಳಿಸುವಂತೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸೂಚಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ ಬಳಿಕ ಬೇಳೆ ಕಾಳುಗಳ ಬೆಲೆ ಇಳಿಕೆ ಮಾಡುವಂತೆ ಸೂಚಿಸಿದ್ದಾರೆ.

ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ತೊಗರಿ, ಕಡಲೆ, ಉದ್ದು ಸೇರಿದಂತೆ ಮತ್ತಿತರ ಬೇಳೆಗಳ ಬೆಲೆಯಲ್ಲಿ ಶೇಕಡಾ.4ರಷ್ಟು ಕುಸಿತ ಕಂಡಿದೆ.

ಹೀಗಿದ್ದರೂ ವ್ಯಾಪಾರಿಗಳು ದರ ಇಳಿಸದಿರುವುದು ನಮ್ಮ ಗಮನಕ್ಕೆ ಬಂದಿದೆ. ಎಲ್ಲಾ ವರ್ತಕರು ಬೇಳೆ ಕಾಳು ಬೆಲೆ ಕಡಿಮೆ ಮಾಡುವಂತೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.

ಈಗಾಗಲೇ ಬೇಳೆಗಳ ಬೆಲೆಯನ್ನು ಕೂಡಲೇ ಇಳಿಸುವಂತೆ ಈ ದೊಡ್ಡ ವರ್ತಕರಿಗೂ ಸೂಚನೆ ನೀಡಲಾಗಿದೆ. ಈ ನಿರ್ದೇಶನ ಅನುಸರಿಸಲು ವಿಫಲವಾದರೇ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಎಚ್ಚರಿಕೆ ನೀಡಿದ್ದಾರೆ.

 

Tags:
error: Content is protected !!