ನವದೆಹಲಿ: ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ಸೇನಾ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯಗೊಂಡಿದೆ.
ಕದನ ವಿರಾಮ ಘೋಷಣೆಯಾದ ಬಳಿಕವೂ ಪಂಜಾಬ್‌ನ ಹಲವೆಡೆ ಸೈರನ್ ಸದ್ದು ಮೊಳಗಿತ್ತು. ಪಾಕ್ ಸೇನೆಯಿಂದ ದಾಳಿಯ ಭೀತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಮೃತಸರದಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು. ಯಾರೂ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿತ್ತು.
ಇದೀಗ ಅಮೃತಸರದಲ್ಲಿ ರೆಡ್ ಅಲರ್ಟ್ ಮುಕ್ತಾಯಗೊಂಡಿದ್ದು, ಅಮೃತಸರ ಸೇರಿದಂತೆ ಹಲವು ನಗರಗಳಲ್ಲಿ ಸಾಮಾನ್ಯ ಚಟುವಟಿಕೆ ಪುನರಾರಂಭಗೊಂಡಿದೆ. ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.





