ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸಲು ಹಾಗೂ ವಂಚನೆಗಳನ್ನು ತಡೆಯುವ ಉದ್ದೇಸದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿ ಹೊರಡಿಸಿದೆ.
ಇನ್ನುಮುಂದೆ ಡಿಜಿಟಲ್ ಪಾವತಿ ಮಾಡುವ ವೇಳೆ ಕೇವಲ ಒಟಿಪಿ ನಮೂದಿಸಿದರೆ ಸಾಲದು, ಅದರೊಂದಿಗೆ ಹೆಚ್ಚುವರಿ ಭದ್ರತಾ ಹಂತಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ನಾಳೆ ಅಂದರೆ ಏಪ್ರಿಲ್.1, 2026ರಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿದೆ.
ಇನ್ನು ಮುಂದೆ ಪ್ರತಿ ವಹಿವಾಟಿಗೆ ಕನಿಷ್ಠ ಎರಡು ಹಂತದ ದೃಢೀಕರಣ ಇರಲೇಬೇಕು. ಕೇವಲ ಒಟಿಪಿ ಸಾಕಾಗುವುದಿಲ್ಲ. ಅದರೊಂದಿಗೆ ಪಿನ್, ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ಅಥವಾ ಟೋಕನ್‌ಗಳಲ್ಲಿ ಯಾವುದಾದರೂ ಒಂದನ್ನು ಬಳಸುವುದು ಕಡ್ಡಾಯ ಎಂದು ತಿಳಿಸಲಾಗಿದೆ.




