ಹೈದರಾಬಾದ್: ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ಶನಿವಾರ(ಜೂ.8) ಜಾವ ನಿಧನರಾಗಿದ್ದಾರೆ.
ರಾಮೋಜಿ ರಾವ್ ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಆಸ್ಪತ್ರಯಲ್ಲಿ ಬೆಳಗಿನ ಜಾವ ೩ ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ರಾಮೋಜಿರಾವ್ ಅವರು ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ ಮತ್ತು ರಾಮೋಜಿ ಫಿಲ್ಮ್ ಸಿಟಿಯನ್ನು ಸ್ಥಾಪಿಸಿದರು. ಮಾಧ್ಯಮ ಲೋಕದಲ್ಲೂ ಇವರ ಸಾಧನೆ ಗಮನಾರ್ಹ, ಈನಾಡು ಪತ್ರಿಕೆ, ತೆಲುಗು ಈಟಿವಿಯ ಸಂಸ್ಥಾಪಕರಾಗಿದ್ದರು.





