ನವದೆಹಲಿ: ಸಂಸತ್ ಮುಂಗಾರು ಅಧಿವೇಶನದಲ್ಲಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾವು ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದು, 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ್ದೇವೆ. ಕೇವಲ 22 ನಿಮಿಷಗಳಲ್ಲಿ ಆಪರೇಷನ್ ಸಿಂಧೂರ ಮುಗಿದಿತ್ತು. ನಮ್ಮ ಮೇಲೆ ಪಾಕ್ ದಾಳಿ ಮಾಡಲು ಮುಂದಾಗಿತ್ತು. ಆಗ ಪಾಕ್‌ನ 9 ಸೇನಾನೆಲೆಗಳನ್ನು ಭಾರತ ಹೊಡೆದು ಹಾಕಿದೆ.
ಉಗ್ರರ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದ್ದು, ಪಾಕ್ ಬೆಂಬಲಿತ ಉಗ್ರರು ನಿರ್ನಾಮ ಆಗಿದ್ದಾರೆ. ಆಪರೇಷನ್ ವೇಳೆ ನಮ್ಮಲ್ಲಿ ಯಾವುದೇ ಹಾನಿಯಾಗಿಲ್ಲ. ನಮ್ಮ ಸೇನೆ ಉಗ್ರರನ್ನು ಹತ್ಯೆಗೈದಿದೆ, ಜನರನ್ನಲ್ಲ. ನಾವು ಅವರ ಮನೆಗೆ ನುಗ್ಗಿ ಹೊಡೆದಿದ್ದೇವೆ ಎಂದು ಆಪರೇಷನ್ ಸಿಂಧೂರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು





