Mysore
18
overcast clouds

Social Media

ಬುಧವಾರ, 28 ಜನವರಿ 2026
Light
Dark

ಡೊನಾಲ್ಡ್‌ ಟ್ರಂಪ್‌ ಸುಂಕ ಸಮರಕ್ಕೆ ರಾಜನಾಥ್‌ ಸಿಂಗ್ ತಿರುಗೇಟು

derajnata sing i (1)

ಮಧ್ಯಪ್ರದೇಶ: ಭಾರತದ ಅಭಿವೃದ್ಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಡೊನಾಲ್ಡ್‌ ಟ್ರಂಪ್‌ ಸುಂಕ ಸಮರಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಿರುಗೇಟು ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಟ್ರಂಪ್‌ ಅವರ ಸುಂಕ ಯುದ್ಧ ಮತ್ತು ಪಾಕಿಸ್ತಾನದ ವಿರುದ್ಧ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಆಪರೇಷನ್‌ ಸಿಂಧೂರ್‌ ಅನ್ನು ಶ್ಲಾಘಿಸಿದ ಅವರು, ಭಾರತದ ರಕ್ಷಣಾ ಸಾಮರ್ಥ್ಯ, ಆರ್ಥಿಕ ಪ್ರಗತಿ ಹಾಗೂ ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವನ್ನು ಒತ್ತಿ ಹೇಳಿದ್ದಾರೆ.

ಭಾರತದ ವೇಗದ ಅಭಿವೃದ್ಧಿಯಿಂದ ಸಂತೋಷಪಡದೇ ಇರುವ ಕೆಲವು ಜನರಿದ್ದಾರೆ. ಅವರು ನಾವೇ ಎಲ್ಲರಿಗೂ ಒಡೆಯರು, ಭಾರತ ಹೇಗೆ ಇಷ್ಟ ವೇಗವಾಗಿ ಬೆಳೆಯುತ್ತಿದೆ ಎಂದು ಭಾವಿಸುತ್ತಾರೆ. ಜೊತೆಗೆ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಜಗತ್ತು ಖರೀದಿಸದಂತೆ ದುಬಾರಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಪರೋಕ್ಷವಾಗಿ ಟ್ರಂಪ್‌ಗೆ ಟಾಂಗ್ ನೀಡಿದರು.

Tags:
error: Content is protected !!