ಪಶ್ಚಿಮ ಬಂಗಾಳ: ಇಂದು (ಸೋಮವಾರ, ಜೂನ್.17) ಬೆಳಿಗ್ಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತವಾದ ಮಾರ್ಗದಲ್ಲಿ ರೈಲುಗಳ ನಡುವೆ ಡಿಕ್ಕಿಯಾಗುವುದನ್ನು ತಡೆಯುವ ಕವಚ್ ವ್ಯವಸ್ಥೆಯನ್ನು ಅಳವಡಿಸಿಲ್ಲ ಎಂದು ರೈಲ್ವೆ ಮಂಡಳಿ ಅಧ್ಯಕ್ಷೆ ಜಯಾ ವರ್ಮಾ ಸಿನ್ಹಾ ಹೇಳಿದ್ದಾರೆ.
ಕಂಚನಾಜುಂಗಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲು ಡಿಕ್ಕಿ ಹೊಡೆದಿರುವುದು ಇದೇ ಮಾರ್ಗದಲ್ಲಿ ಎನ್ನುವುದು ವಿಶೇಷ.
ಸರಕು ಸಾಗಣೆಯ ಗೂಡ್ಸ್ ರೈಲು ಚಾಲಕ ಸಿಗ್ನಲ್ ಗಮನಿಸಿದ ಕಾರಣಕ್ಕೆ ಈ ಅಪಘಾತ ಉಂಟಾಗಿರಬಹುದು. ಹಿಂಬದಿಗೆ ಬಂದು ಗುದ್ದಿರುವ ಕಾರಣ ಗಾರ್ಡ್ ಕೋಚ್‌ಗೆ ಹಾನಿಯಾಗಿದೆ ಹೊರತು ಪ್ರಯಾಣಿಕರಿಗ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿಯೂ ಕವಚ್ ಅಳವಡಿಸುವ ಯೋಜನೆಯಿದೆ ಎಂದು ಸಿನ್ಹಾ ಹೇಳಿದರು.
ಕವಚ್ ಅಳವಡಿಸುವ ಕಾರ್ಯ ತ್ವರಿತವಾಗಿ ನಡೆಯುತ್ತಿದ್ದು, ಈವರೆಗೆ ಈ ವ್ಯವಸ್ಥೆಯ 1500 ಕಿಮೀ ರೈಲು ಮಾರ್ಗಗಳಿಗೆ ಈಗಾಗಲೇ ಕವಚ್ ಅಳವಡಿಸಲಾಗಿದ್ದು, ಈ ವರ್ಷದ ಅಂತ್ಯದೊಳಗೆ 3000 ಕಿಮೀ ಉದ್ದದ ಮಾರ್ಗಕ್ಕೆ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ ರಂಗಪಾನಿ ನಿಲ್ದಾಣದಿಂದ ಹೊರಟಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು (ಟ್ರೈನ್ ಸಂಖ್ಯೆ 13174) ಸಿಗ್ನಲ್ ದೋಷದಿಂದಾಗಿ ರಾಣಿಪಾತ್ರಾ ಹಾಗೂ ಛತ್ತರ್ ಹಾಟ್ ನಿಲ್ದಾಣದ ನಡುವೆಯೇ ಬೆಳಿಗ್ಗೆ 5.30 ರಿಂದಲೇ ನಿಂತಿತ್ತು.
ಇದೇ ಮಾರ್ಗದಲ್ಲಿ ಗೂಡ್ಸ್ ಗಾಡಿಯೊಂದು ಹಿಂಬದಿಯಿಂದ ಬರುತ್ತಿದ್ದು, ಸಿಗ್ನಲ್ ದೋಷ ನೋಡಿಕೊಳ್ಳದೇ ಕಾಂಚನಜುಂಗಾ ರೈಲಿಗೆ ಅಪ್ಪಳಿಸಿದೆ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರ ಪೈಕಿ 15 ಮಂದಿ ಮೃತರಾಗಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.





