Mysore
26
few clouds

Social Media

ಮಂಗಳವಾರ, 24 ಮಾರ್ಚ್ 2026
Light
Dark

ರಾಹುಲ್‌ ಗಾಂಧಿ ಮುಂದಿನ 20 ವರ್ಷ ದೇಶದ ಪ್ರಧಾನಿಯಾಗಲಿದ್ದಾರೆ: ರೇವಂತ್‌ ರೆಡ್ಡಿ

ಕೇರಳ: ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೇಶದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಲೋಕಸಭಾ ಚುನಾವಣೆಗೂ ಮುನ್ನವೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್‌ ಗಾಂಧಿ ಪರ ವಯನಾಡಿಯಲ್ಲಿ ಪ್ರಚಾರ ಮಾಡಲು ಬಂದಿದ್ದ ರೇವಂತ್ ರೆಡ್ಡಿ ಎಎನ್‌ಐ ಜತೆ ಮಾತನಾಡುತ್ತಾ ವಾರಣಾಸಿ ಸಂಸದರು 10ವರ್ಷ ಪ್ರಧಾನಿಯಾಗಿದ್ದರು, ಇದೀಗ ವಯನಾಡಿನ ಸಂಸದ ರಾಹುಲ್‌ ಗಾಂಧಿ ಮುಂದಿನ 20 ವರ್ಷ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಚುನಾವಣೆ ನಡೆಸುತ್ತಿದೆ ಎಂದು ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅನುಮಾನ ವ್ಯಕ್ತಪಡಿಸಿದ ಅವರು ಬಿಜೆಪಿ ಬ್ಯಾಲೇಟ್‌ ಪೇಪರ್‌ ಮೂಲಕ ಚುನಾವಣೆ ನಡೆಸಲು ಏಕೆ ಭಯ ಪಡುತ್ತದೆ ಎಂದು ಪ್ರಶ್ನಿಸಿದರು.

ದಕ್ಷಿಣ ಭಾರತದ ಜನರ ಮತ ಕೇಳಲು ಮೋದಿಗೆ ಹಕ್ಕಿಲ್ಲ. ದಕ್ಷಿಣಕ್ಕೆ ನೀವು ಏನು ಕೊಟ್ಟಿದ್ದೀರಾ, ನಮಗೆ ಬುಲೆಟ್‌ ಟ್ರೈನ್‌ ಕೊಟ್ಟಿಲ್ಲ, ದೇವಾಲಯ ಕಾರಿಡಾಲರ್ ಕೊಟ್ಟಿಲ್ಲ, ಮಂತ್ರಿಮಂಡಲದ ಪ್ರಬಲ ಖಾತೆ ಕೊಟ್ಟಿಲ್ಲ, ಎಲ್ಲವನ್ನು ಉತ್ತರ ಭಾರತಕ್ಕೆ ಕೋಟಿದ್ದೀರಿ, ಇದೀಗ ಚುನಾವಣೆ ಬಂದಾಗಿ ಕೇವಲ ಮತಕ್ಕಾಗಿ ದಕ್ಷಿಣದ ಜನರನ್ನು ನೆನಪಿಸಿಕೊಳ್ಳುತ್ತೀರ ಎಂದು ಟೀಕಿಸಿದರು.

Tags:
error: Content is protected !!