ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮೇಕ್ ಇನ್ ಇಂಡಿಯಾ ವಿರುದ್ಧ ಕಿಡಿಕಾರಿದ್ದಾರೆ.
ಸಂಸತ್ ಭವನದಲ್ಲಿ ಇಂದು(ಫೆಬ್ರವರಿ.3) ಭಾಷಣ ಮಾಡಿದ ಅವರು, ಕೇಂದ್ರ ಬಜೆಟ್ ಮಂಡಿಸುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದಲ್ಲಿ ಹೊಸದೇನು ಇಲ್ಲ. ಅವರು ಕಷ್ಟಪಟ್ಟು ಭಾಷಣ ಮಾಡಿದ್ದಾರೆ ಅಷ್ಟೇ. ಅವರು ಹಳೇಯ ವಿಚಾರಗಳನ್ನೇ ಮತ್ತೆ ಉಚ್ಚರಿಸಿದ್ದು, ರಾಷ್ಟ್ರಪತಿ ಅವರ ಭಾಷಣದಲ್ಲಿ ಹೊಸ ವಿಷಯವೇ ಇರಲಿಲ್ಲ ಎಂದರು.
ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ಎಂದು ಹೇಳುತ್ತದೆ ಅಷ್ಟೇ. ಆದರೆ ಉತ್ಪಾದನೆಯಲ್ಲಿ ಭಾರತ ದೇಶ ಹಿಂದುಳಿದಿದೆ. ನಿರುದ್ಯೋಗ ನಿವಾರಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಉದ್ಯೋಗ ಸೃಷ್ಠಿಸುವಲ್ಲಿ ಕ್ರಮ ಕೈಗೊಂಡಿಲ್ಲ. ಇನ್ನೂ ಉತ್ಪಾದನಾ ಕ್ಷೇತ್ರದಲ್ಲಿ ವಿಫಲವಾಗಿದ್ದು, ಚೀನಾದಲ್ಲಿ ಉತ್ಪಾದನೆ ಗುಣಮಟ್ಟ ಚೆನ್ನಾಗಿದೆ. ಆದರೆ ಭಾರತದಲ್ಲಿ ಉತ್ಪಾದನೆ ಗುಣಮಟ್ಟ ಚೆನ್ನಾಗಿಲ್ಲ ಎಂದು ಆರೋಪಿಸಿದರು.
ಇನ್ನೂ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಎನ್‌ಡಿಎ ಸರ್ಕಾರದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.



