ಭೋಪಾಲ್: ಕ್ರಿಕೆಟ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಂತೆಯೇ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರು ಭಾರತ ರಾಜಕೀಯಕ್ಕೆ ಅತ್ಯುತ್ತಮ ಫಿನಿಷರ್ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರಾಹುಲ್ ಗಾಂಧಿಯ ಕಾಲೆಳೆದಿದ್ದಾರೆ.
ಮಧ್ಯಪ್ರದೇಶದ ಸಿದ್ಧಿ ಜಿಲ್ಲೆಯಲ್ಲಿ ಶನಿವಾರ (ಏ.೬) ಚುನಾವಣಾ ಪ್ರಚಾರದಲ್ಲಿ ಮಾತನಾಡಿ, ಭಾರತದ ರಾಜಕೀಯದಲ್ಲಿ ಒಂದು ಕಾಲದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಿತ್ತು. ಆದರೆ ಸದ್ಯ 2 ರಿಂದ 3 ಚಿಕ್ಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಹೀಗೇಕೆ ಆಯಿತು ಎಂದು ಯೋಜಿಸಿದ ನಾನು, ಈ ಅನಿಸಿಕೆಗೆ ಬಂದಿದ್ದೇನೆ, ಕ್ರಿಕೆಟ್‌ನಲ್ಲಿ ಪಂದ್ಯ ಅಂತ್ಯಗೊಳಿಸುವ ಧೋನಿ ತರ ಭಾರತೀಯ ರಾಜಕೀಯ ಪಂದ್ಯವನ್ನು ಉತ್ತಮವಾಗಿ ಅಂತ್ಯಗೊಳಿಸುವವರು ರಾಹುಲ್ ಗಾಂಧಿ ಎಂಬುದು ಸ್ಪಷ್ಟ. ಏಕೆಂದರೆ ಬಹಳಷ್ಟು ನಾಯಕರು ಆ ಪಕ್ಷ ತೊರೆದಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.
ರಾಹುಲ್ ಗಾಂಧಿ ಅವರು ಅತ್ಯಂತ ಹಳೆಯ ಪಕ್ಷವನ್ನು ಮುಗಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಭ್ರಷ್ಠಾಚಾರದೊಂದಿಗೆ ಬೇರ್ಪಡಿಸಲಾಗದ ಸಂಬಂಧವನ್ನು ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್‌ನ ಬಹಳಷ್ಟು ನಾಯಕರು ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಯಾವುದೇ ಮಂತ್ರಿ ವಿರುದ್ಧ ಇಂಥ ಭ್ರಷ್ಟಾಚಾರದ ಆರೋಪವಿಲ್ಲ ಎಂದರು.




