Mysore
28
few clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಚುನಾವಣಾ ಆಯೋಗಕ್ಕೆ ದೂರುಗಳ ಬಗ್ಗೆ ತಿಳಿಸುವೆ; ಹರಿಯಾಣ ಚುನಾವಣಾ ಸೋಲಿನ ಬಗ್ಗೆ ರಾಹುಲ್‌ ಗಾಂಧಿ ಫಸ್ಟ್‌ ರಿಯಾಕ್ಷನ್‌

 

ದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಅನಿರೀಕ್ಷಿತ ಸೋಲು ಉಂಟಾಗಿದ್ದು, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾಗಿರುವ ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು ಎಂದು ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರ ಗೆಲುವಿನ ರಾಹುಲ್‌ ಗಾಂಧಿ ತಮ್ಮ ಎಕ್ಸ್‌ ಖಾತೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. ಏಕೆಂದರೆ ರಾಜ್ಯದಲ್ಲಿ ಸಂವಿಧಾನದ ಗೆಲುವು, ಪ್ರಜಾಪ್ರಭುತ್ವದ ಹಾಗೂ ಸ್ವಾಭಿಮಾನಿ ಇಂಡಿಯಾದ ಗೆಲುವಾಗಿದೆ ಎಂದಿದ್ದಾರೆ.

ಹರಿಯಾಣ ವಿಧಾನಸಭಾ ಕ್ಷೇತ್ರ ಚುನಾವಣೆಗಾಗಿ ದಣಿದ ಎಲ್ಲಾ ಜನರಿಗೆ ಹಾಗೂ ಜನರ ಕಠಿಣ ಪರಿಶ್ರಮಕ್ಕೆ ಧನ್ಯವಾದಗಳು. ಈ ರಾಜ್ಯದ ಅನಿರೀಕ್ಷಿತ ಚುನಾವಣಾ ಫಲಿತಾಂಶಗಳನ್ನು ನಾವು ವಿಶ್ಲೇಷಿಸುತ್ತಿದ್ದೇವೆ. ಬಳಿಕ ವಿಧಾನಸಭಾ ಕ್ಷೇತ್ರದಿಂದ ಬರುವ ದೂರುಗಳ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು. ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಮಾಜಿಕ, ಆರ್ಥಿಕ ಹಾಗೂ ಸತ್ಯಕ್ಕಾಗಿ ಈ ಹೋರಾಟವನ್ನು ಮುಂದುವರೆಸುತ್ತಿದ್ದೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

Tags: