Mysore
29
scattered clouds

Social Media

ಗುರುವಾರ, 02 ಏಪ್ರಿಲ 2026
Light
Dark

Pushpa-2 | ನಟ ಅಲ್ಲು ಅರ್ಜುನ್‌ ಬಂಧನ

ಹೈದರಾಬಾದ್: ಇತ್ತೀಚೆಗೆ ಬಿಡುಗಡೆಗೊಂಡ ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್‌ ಅವರನ್ನು ಹೈದರಾಬಾರ್‌ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್‌ನ ಅವರ ನಿವಾಸದಿಂದಲೇ ಬಂಧಿಸಲಾಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಏನಿದು ಪ್ರಕರಣ?
ಇದೇ ತಿಂಗಳ 4 ರಂದು ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಪುಷ್ಪ-2 ಪ್ರೀಮಿಯರ್‌ ಶೋ ವೇಳೆ ಅಲ್ಲು ಅರ್ಜುನ್‌ ಅಲ್ಲಿಗೆ ಬಂದು ಹೋಗಿದ್ದರು. ಆ ವೇಳೆ ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ರೇವತಿ ಎಂಬ ಮಹಿಳೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದು, ಆಕೆಯ ಮಗ ಗಂಭೀರ ಗಾಯಗೊಂಡಿದ್ದ. ಈ ಘಟನೆ ಕುರಿತ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್‌, ಸಿನಿಮಾ ಘಟಕ ಹಾಗೂ ಚಿತ್ರಮಂದಿರ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

ಈ ಸಂಬಂಧ ಅಲ್ಲು ಅರ್ಜುನ್‌ ಹೈಕೋರ್ಟ್‌ ಮೇಟ್ಟಿಲೇರಿ, ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪೊಲೀಸರು ಶುಕ್ರವಾರ ಆತನನ್ನು ವಶಕ್ಕೆ ಪಡೆದಿದ್ದಾರೆ.

ಯಾವುದೇ ಮಾಹಿತಿ ನೀಡಿಲ್ಲ ಮತ್ತು ಸೂಕ್ತ ಭದ್ರತೆಯನ್ನು ಏರ್ಪಡಿಸದೆ ಐಕನ್‌ ಸ್ಟಾರ್‌ ಅಲ್ಲು ಅರ್ಜುನ್‌ ಚಿತ್ರಮಂದಿರಕ್ಕೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ.

 

 

Tags:
error: Content is protected !!