Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಇಳುವರಿ ಹೆಚ್ಚಿಸುವ 109 ಪ್ರಭೇದಗಳ ಬೀಜಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಅಧಿಕ ಇಳುವರಿ ಮತ್ತು ಪೌಷ್ಠಿಕಾಂಶ ವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ವಿವಿಧ ವಾತಾವರಣಗಳಲ್ಲಿ ಬೆಳೆಯಬಹುದಾದ ಹಾಗೂ ಒಣ ಬೇಸಾಯ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ 109 ಪ್ರಭೇದಗಳ ಬೀಜಗಳನ್ನು ಬಿಡುಗಡೆ ಮಾಡಿದ್ದಾರೆ.

ಈ ಬೀಜಗಳಿಂದ ಬೆಳೆಯುವ ಬೆಳೆ ಅತೀ ಹೆಚ್ಚು ಉತ್ಪಾದನೆ ಹೆಚ್ಚಿಸುವ ಮೂಲಕ ರೈತರ ಆದಾಯವನ್ನು ವೃದ್ಧಿಸುತ್ತದೆ.

ಈ ಪ್ರಭೇದಗಳ 34 ಧಾನ್ಯಗಳನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಇಲ್ಲಿ 27 ತೋಟಗಾರಿಕೆ ಬೆಳೆಗಳು ಸಹ ಇವೆ.

ಬೇಳೆ ಕಾಳುಗಳು, ಧಾನ್ಯಗಳು, ಎಣ್ಣೆ ಕಾಳುಗಳು, ಹತ್ತಿ, ಕಬ್ಬು, ಮೇವು, ವಿವಿಧ ಹಣ್ಣುಗಳು, ತರಕಾರಿ, ಹೂವು, ಮಸಾಲೆ ಪದಾರ್ಥಗಳು, ಔಷಧಿ ಸಸ್ಯ ಸೇರಿದಂತೆ ಹಲವು ಬೀಜಗಳು ಇದರಲ್ಲಿವೆ.

ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಟ್ಟ ಕ್ರಮ ಕೈಗೊಂಡಿದ್ದು, ಹವಾಮಾನ ವೈಪರೀತ್ಯಗಳನ್ನು ತಡೆಯಬಲ್ಲ ವಿಧಾನಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಈ ಮೂಲಕ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಮತ್ತು ಅಂಗನವಾಡಿಯಲ್ಲಿ ಪೌಷ್ಠಿಕಾಂಶ ಕೊರತೆ ಹೋಗಲಾಡಿಸಲು ಸಹ ಪ್ರಧಾನಿ ಮೋದಿ ಕ್ರಮ ಕೈಗೊಂಡಿದ್ದಾರೆ.

 

Tags: