ಪೋಲೆಂಡ್: ಪ್ರಧಾನಿ ನರೇಂದ್ರ ಮೋದಿ ಅವರಿಂದು ಪೋಲೆಂಡ್ ರಾಜಧಾನಿ ವಾಸಾಗೆ ಬಂದಿಳಿದಿದ್ದಾರೆ.
ಭಾರತದ ಪ್ರಧಾನಿಯೊಬ್ಬರು 43 ವರ್ಷಗಳ ನಂತರ ಕೈಗೊಂಡಿರುವ ಮೊದಲ ಪೋಲೆಂಡ್ ಭೇಟಿ ಇದಾಗಿದೆ.
ಈ ಭೇಟಿಯು ಭಾರತ ಹಾಗೂ ಪೋಲೆಂಡ್ ನಡುವಣ ಬಾಂಧವ್ಯಕ್ಕೆ ವೇಗ ನೀಡಲಿದೆ. ಉಭಯ ರಾಷ್ಟ್ರಗಳ ಜನರಿಗೆ ಪ್ರಯೋಜನವಾಗಲಿದೆ ಎಂದು ಪೋಲೆಂಡ್‌ಗೆ ಬಂದಿಳಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಅನಿವಾಸಿ ಭಾರತೀಯರು ಭವ್ಯ ಸ್ವಾಗತ ಕೋರಿದ್ದಾರೆ. ಈ ಸಂಬಂಧ ಚಿತ್ರಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಪೋಲೆಂಡ್ ಭೇಟಿ ಬಳಿಕ ಉಕ್ರೇನ್‌ನ ರಾಜಧಾನಿ ಕೀವ್‌ಗೆ ಮೋದಿ ತೆರಳಲಿದ್ದಾರೆ. ನರೇಂದ್ರ ಮೋದಿ ಅವರು 1991ರಲ್ಲಿ ಉಕ್ರೇನ್ ಸ್ವತಂತ್ರವಾದ ಬಳಿಕ ಆ ದೇಶಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.