Mysore
33
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಸಂಕ್ರಾಂತಿಯಂದು ವಿಶ್ವದ ಚಿಕ್ಕ ಪುಂಗನೂರು ಹಸುಗಳಿಗೆ ಹುಲ್ಲು ಹಾಕಿದ ಪ್ರಧಾನಿ ಮೋದಿ

ನವದೆಹಲಿ: ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಪುಂಗನೂರು ಹಸುಗಳಿಗೆ ಆಹಾರ ನೀಡಿದ್ದಾರೆ.

ಮನೆಯ ಹೊರಗಿನ ಆವರಣದಲ್ಲಿರುವ ಹುಲ್ಲು ಹಾಸಿನ ಮೇಲೆ ನಿಂತು ಹಬ್ಬದ ಸಂಪ್ರದಾಯದಂತೆ ಬಟ್ಟೆಯಿಂದ ಅಲಂಕಾರಗೊಂಡಿದ್ದ ಹಸುಗಳಿಗೆ ಹಸಿರು ಹುಲ್ಲನ್ನು ನೀಡುತ್ತಿರುವ ವಿಡಿಯೋವನ್ನು ಪ್ರಧಾನಿ ಖಾತೆಯಿಂದ ಅಪ್ಲೋಡ್‌ ಮಾಡಲಾಗಿದೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೂಲದ ಪುಂಗನೂರು ವಿಶ್ವದ ಅತ್ಯಂತ ಚಿಕ್ಕ ಹಸು ತಳಿ ಎಂದು ಪ್ರಖ್ಯಾತಿ ಪಡೆದಿದೆ. 2.5 ಅಡಿ ಎತ್ತರ ಹಾಗೂ ಸಾಧಾರಣ 115-200 ಕೆಜಿ ತೂಕ ಹೊಂದಿರುತ್ತದೆ. ಅಗಲವಾದ ಹಣೆ, ಸಣ್ಣ ಕಾಲುಗಳನ್ನು ಹೊಂದಿರುವುದು ಇದರ ವೈಶಿಷ್ಟ್ಯ. ಅಳಿವಿನಂಚಿನಲ್ಲಿರುವ ಈ ತಳಿಯ ಹಾಲನ್ನು ತಿರುಪತಿ ತಿಮ್ಮಪ್ಪನ ನೈವೇದ್ಯಕ್ಕೆ ಬಳಸಲಾಗುತ್ತದೆ.

Tags:
error: Content is protected !!