ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಕಾಲ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದು, ಅಲ್ಲಿಂದ ಭಾರತಕ್ಕೆ ಹಿಂದಿರುಗುವಾಗ ವಿಮಾನದಲ್ಲಿಯೇ ರಾಮಸೇತು ದರ್ಶನ ಪಡೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಶ್ರೀ ರಾಮನವಮಿ ಹಬ್ಬವಾಗಿರುವ ಇಂದಿನ ದಿನವೇ ಸ್ವಲ್ಪ ಸಮಯದ ಹಿಂದೆ ಶ್ರೀಲಂಕಾದಿಂದ ಹಿಂತಿರುಗುವಾಗ, ರಾಮಸೇತು ದರ್ಶನ ಪಡೆಯುವ ನನಗೆ ಪುಣ್ಯ ದೊರೆತಿದೆ ಎಂದಿದ್ದಾರೆ.
ಕಾಕತಾಳೀಯ ಎಂಬಂತೆ ರಾಮನವಮಿಯಂದು ಅಯೋಧ್ಯೆಯಲ್ಲಿ ಸೂರ್ಯ ತಿಲಕ ನಡೆಯುತ್ತಿದ್ದ ಸಮಯದಲ್ಲಿ ನನಗೆ ರಾಮಸೇತು ದರ್ಶನ ಭಾಗ್ಯ ಸಿಕ್ಕಿತು. ಪ್ರಭು ಶ್ರೀರಾಮ ನಮ್ಮೆಲ್ಲರಿಗೂ ಒಗ್ಗೂಡಿಸುವ ಶಕ್ತಿ. ಅವನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಹೇಳಿದ್ದಾರೆ.