ಹೊಸದಿಲ್ಲಿ : ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿರುವ ಕ್ರಮಕ್ಕೆ ಲೋಕಸಭೆ ಗುರುವಾರ ಒಪ್ಪಿಗೆ ನೀಡಿತು.
ಪಕ್ಷಾತೀತವಾಗಿ ಸಂಸದರು ಈ ನಿರ್ಣಯವನ್ನು ಬೆಂಬಲಿಸಿದರು. ಆದರೆ ಮಣಿಪುರದಲ್ಲಿನ ಪರಿಸ್ಥಿತಿ ಬಗ್ಗೆ ಕೇಂದ್ರವನ್ನು ಟೀಕಿಸಿದರು.
ಗುರುವಾರ ರಾತ್ರಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ನಡೆದ ಸುದೀರ್ಘ ಚರ್ಚೆಯ ಬಳಿಕ 41 ನಿಮಿಷಗಳ ಕಾಲ ಮಣಿಪುರದ ಬಗ್ಗೆ ಚರ್ಚೆ ನಡೆಯಿತು. ಆದರೆ ಮಧ್ಯರಾತ್ರಿ 2 ಗಂಟೆಗೆ ಚರ್ಚೆ ಕೈಗೆತ್ತಿಕೊಂಡ ಬಗ್ಗೆ ಪ್ರತಿಪಕ್ಷಗಳ ವಿರೋಧ ವ್ಯಕ್ತಪಡಿಸಿದರು. ಆದರೆ, ಸ್ವೀಕರ್ ಸೂಚನೆ ಮೇರೆಗೆ ಚರ್ಚೆ ನಡೆಯಿತು.
ಮಣಿಪುರದಲ್ಲಿ ಶಾಂತಿ ನೆಲೆಯಾಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಮುಂದಾಗಿ ಚುನಾವಣೆ ನಡೆಸಿ ಜನರಿಂದ ಆಯ್ಕೆಯಾದ ಸರ್ಕಾರ ರಚನೆಯಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು.





