Mysore
26
scattered clouds

Social Media

ಸೋಮವಾರ, 26 ಜನವರಿ 2026
Light
Dark

ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ಮುರ್ಮು

ಹೊಸದಿಲ್ಲಿ : ಹೊಸದಿಲ್ಲಿಯ ಕರ್ತವ್ಯಪಥದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಧ್ವಜವನ್ನು ಧ್ವಜಾರೋಹಣ ಮಾಡಿ ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಷ್ಟ್ರಪತಿ ಮುರ್ಮು ಅವರು ಸಾಂಪ್ರದಾಯಿಕ ಆಗಮಿಸಿ, ರಾಷ್ಟ್ರಪತಿ ಭವನದ ಭದ್ರತಾ ತುಕಡಿಯೊಂದಿಗೆ ಕರ್ತವ್ಯಪಥಕ್ಕೆ ಆಗಮಿಸಿದರು. ಧ್ವಜಾರೋಹಣದ ನಂತರ ರಾಷ್ಟ್ರಗೀತೆಯೊಂದಿಗೆ ಸೆಲ್ಯೂಟ್ ನೀಡಲಾಯಿತು. ಈ ವರ್ಷದ ಗಣರಾಜ್ಯೋತ್ಸವದ ಥೀಮ್ ವಂದೇ ಮಾತರಂನ 150 ವರ್ಷಗಳ ಸ್ಮರಣೆಯನ್ನು ಕೇಂದ್ರೀಕರಿಸಿದ್ದು, ಆತ್ಮನಿರ್ಭರ ಭಾರತ, ಸಾಂಸ್ಕೃತಿಕ ವೈವಿಧ್ಯತೆ, ಸೇನಾ ಸಾಮರ್ಥ್ಯ ಮತ್ತು ದೇಶಭಕ್ತಿಯನ್ನು ಪ್ರದರ್ಶಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಬಾರಿ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಅಂಟೋನಿಯೋ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಪರೇಡ್‌ನಲ್ಲಿ ಸೇನಾ, ನೌಕಾಪಡೆ, ವಾಯುಸೇನೆಯ ಘಟಕಗಳು, ವಿವಿಧ ರಾಜ್ಯಗಳ ಟ್ಯಾಬ್ಲೋಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೋಟರ್‌ಸೈಕಲ್ ಸ್ಟಂಟ್‌ಗಳು ಮತ್ತು 29 ವಿಮಾನಗಳ ಫ್ಲೈ-ಪಾಸ್ಟ್ ಸೇರಿದಂತೆ ವಿಶೇಷ ಪ್ರದರ್ಶನಗಳು ನಡೆಯುತ್ತಿವೆ. ರಾಫೇಲ್ ಯುದ್ಧ ವಿಮಾನಗಳು, ಹೈಪರ್‌ಸಾನಿಕ್ ಮಿಸೈಲ್‌ಗಳು ಮತ್ತು ಆತ್ಮನಿರ್ಭರ ಭಾರತದ ಉತ್ಪನ್ನಗಳನ್ನು ಒತ್ತಿ ತೋರಿಸಲಾಗುತ್ತಿದೆ.

ದೇಶಾದ್ಯಂತ ಶಾಲೆಗಳು, ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ದೆಹಲಿಯಲ್ಲಿ 7 ಸುತ್ತಿನ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ.

ವಂದೇ ಮಾತರಂ ಹಾಡಿಗೆ 150 ವರ್ಷಗಳ ಸಂಭ್ರಮ
ಧ್ವಜಾರೋಹಣದ ಬಳಿಕ ವಂದೇ ಮಾತರಂ ಹಾಡಿಗೆ ವಾದ್ಯತಂಡ ಪಥಸಂಚಲನದ ಮೂಲಕ ಗೌರವ ಸೂಚಿಸಿದರು. ಅಲ್ಲದೆ ಆಗಸದಲ್ಲಿ ಯುದ್ಧ ವಿಮಾನಗಳು ದೇಶದ ಧ್ವಜ ರಚನೆ ಮೂಲಕ ಪ್ರದರ್ಶಿಸಲಾಯಿತು.
ಪಶ್ಚಿಮ ಬಂಗಾಳದ ಕವಿ, ಬಂಕಿಮ ಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ ಹಾಡು, ಸ್ವಾತಂತ್ರ್ಯ ಚಳುವಳಿಯ ನಂಟನ್ನು, ಹಾಗೂ ಪ್ರಗತಿಯ ದ್ಯೋತಕವಾಗಿರುವ, ರಾಷ್ಟ್ರಗೀತೆಯ ಗೌರವ ಪಡೆದಿರುವ ಹಾಡಾಗಿದ್ದು, ಇದರ 150 ನೇ ಸಂಭ್ರಮಾಚರಣೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

Tags:
error: Content is protected !!