ನವದೆಹಲಿ: ಕೇಂದ್ರ ಸರ್ಕಾರ ನಾಳೆ(ಡಿ.16) ಲೋಕಸಭೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆ ಮಂಡಿಸುವುದನ್ನು ಮುಂದೂಡಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆಯಲ್ಲಿ ಸೋಮವಾರ(ಡಿಸೆಂಬರ್.16) ಮಂಡನೆಯಾಗಲಿರುವ ವಿವಿಧ ಮಸೂದೆಗಳಿಗೆ ಅಂಗೀಕಾರ ದೊರೆತ ಬಳಿಕ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯನ್ನು ಈ ವಾರದ ಕೊನೆಯಲ್ಲಿ ಮಂಡಿಸಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಲೋಕಸಭೆಯಲ್ಲಿ ಕೇಂದ್ರ ಸರ್ಕಾರ, ಸಂವಿಧಾನದ 129ನೇ ತಿದ್ದುಪಡಿ ಮೂಲಕ ಒಂದು ರಾಷ್ಟ್ರ, ಒಂದು ಚುನಾವಣೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ಮಸೂದೆಯನ್ನು ಮಂಡಿಸಲು ಪಟ್ಟಿ ಮಾಡಿದೆ ಎಂದು ಹೇಳಲಾಗಿತ್ತು. ಅಲ್ಲದೇ ಈಗಾಗಲೇ ಕೇಂದ್ರ ಸರ್ಕಾರ ಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆಯ ಕರಡು ಪ್ರತಿಯನ್ನು ಸಂಸದರಿಗೆ ನೀಡಿದ್ದು, ನಾಳೆ ಸದನ ಕಲಾಪದಲ್ಲಿ ಈ ಮಸೂದೆ ಮಂಡನೆಯಾಗುತ್ತದೆ ಎಂದು ಹೇಳಲಾಗಿತ್ತು.
ಈ ಮಸೂದೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶವನ್ನು ಹೊಂದಿದೆ.