ಚೆನ್ನೈ: ಲೋಕಸಭಾ ಚುನಾವಣೆ 2024ಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ತಮಿಳುನಾಡು ಸರ್ಕಾರ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿನೂತನ ಪೋಸ್ಟರ್ ವಾರ್ ನಡೆಸಿದ್ದಾರೆ.
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಈ ವೇಳೆಯಲ್ಲಿಯೇ ಮೋದಿ ಅವರ ವಿರದ್ಧ ತಮಿಳುನಾಡಿನಾದ್ಯಂತ ಪೋಸ್ಟರ್ ವಾರ್ ನಡೆದಿದೆ.
ಪೋಸ್ಟರ್ ಮೇಲ್ಭಾಗದಲ್ಲಿ ʼಜೀ ಪೇʼ ಎಂದು ಬರೆಯಲಾಗಿದ್ದು, ಈ ಪೋಸ್ಟರ್‌ಗೆ ಪ್ರಧಾನಿ ಮೋದಿ ಫೋಟೋ ಬಳಸಲಾಗಿದೆ. ಅದರೊಂದಿಗೆ ಕ್ಯೂ ಆರ್ ಕೋಡ್ ಕೂಡಾ ನೀಡಲಾಗಿದೆ. ಅದರಲ್ಲಿ “ಸ್ಕ್ಯಾನ್ ಮಾಡಿ-ಸ್ಕ್ಯಾಮ್ ನೋಡಿ” ಎಂದು ಅಡಿ ಬರಹ ಬರೆಯಲಾಗಿದೆ.
ಈ ಪೋಸ್ಟರ್ ಅನ್ನು ಸ್ಕ್ಯಾನ್ ಮಾಡಿದರೇ ಅದು ಬಿಜೆಪಿ ಅವಧಿಯಲ್ಲಿನ ಆಡಳಿತ ಬಗೆಗಿನ ವೀಡಿಯೋಗೆ ಕರೆದೊಯ್ಯುತ್ತದೆ. ಚುನಾವಣಾ ಬಾಂಡ್ ಅಕ್ರಮ, ಸಿಎಜಿ ವರದಿ ಸೇರಿದಂತೆ ದೇಶಾದ್ಯಂತ ಇರುವ ನಿರುದ್ಯೋಗ ಇತ್ಯಾದಿ ವಿಷಯಗಳ ಬಗ್ಗೆ ವಿವರಣೆ ನೀಡಲಾಗಿದೆ.
ಇನ್ನು ಈ ಪೋಸ್ಟರ್ ಅನ್ನು ಯಾರು ಅಂಟಿಸಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಡಿಎಂಕೆ ಪಕ್ಷ ಈ ಕೆಲಸ ಮಾಡಿದೆ ಎಂದು ಊಹಿಸಲಾಗಿದ್ದು, ಸತ್ಯಾಂಶ ತಿಳಿಯಬೇಕಿದೆ.





