Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

2036ರ ವೇಳೆಗೆ ಭಾರತದ ಜನಸಂಖ್ಯೆ ಎಷ್ಟಿರಲಿದೆ ಗೊತ್ತಾ.?

ನವದೆಹಲಿ: 2036ರ ವೇಳೆಗೆ ಭಾರತದ ಜನಸಂಖ್ಯೆ ಸುಮಾರು 152.2 ಕೋಟಿ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ.

2036ರ ವೇಳೆಗೆ ಭಾರತದ ಜನಸಂಖ್ಯೆ ಸುಮಾರು 152.2 ಕೋಟಿ ತಲುಪುವ ನಿರೀಕ್ಷೆಯಿದೆ. 2011ರಲ್ಲಿ ಶೇಕಡಾ 48.5ಕ್ಕೆ ಹೋಲಿಸಿದರೆ ಶೇಕಡಾ 48.8ರಷ್ಟಿದ್ದು ಮಹಿಳಾ ಶೇಕಡಾವಾರು ಸ್ವಲ್ಪ ಸುಧಾರಿಸಿದೆ. ಈ ಬಗ್ಗೆ ಕೇಂದ್ರ ಸಚಿವಾಲಯ ಮಹತ್ವದ ಮಾಹಿತಿಯನ್ನು ಹೊರ ತಂದಿದೆ.

15 ವರ್ಷದೊಳಗಿನ ವ್ಯಕ್ತಿಗಳ ಅನುಪಾತವು 2011ರಿಂದ 2036ರವರೆಗೆ ಕಡಿಮೆಯಾಗುವ ನಿರೀಕ್ಷೆಯಿದೆ. ಇದು ಫಲವತ್ತತೆ ಕ್ಷೀಣಿಸುತ್ತಿರುವ ಕಾರಣದಿಂದಾಗಿರಬಹುದು ಎಂದು ಹೇಳಿದೆ.

ವುಮೆನ್‌ ಅಂಡ್‌ ಮನೆ ಇನ್‌ ಇಂಡಿಯಾ ವರದಿಯ ಪ್ರಕಾರ ದೇಶದಲ್ಲಿ ಫಲವತ್ತತೆ ದರ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 15 ವರ್ಷದೊಳಗಿನವರ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ. ಇದಕ್ಕೆ ವಿರುದ್ಧವಾಗಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ.

ಈ ವರದಿಯಲ್ಲಿ ಮಹಿಳೆಯರು ಹಾಗೂ ಪುರುಷರ ಬಗೆಗಿನ ಸಮಗ್ರ ದೃಷ್ಟಿಕೋನವನ್ನು ನೀಡುವುದಾಗಿದ್ದು, ಜನಸಂಖ್ಯೆ, ಶಿಕ್ಷಣ, ಆರೋಗ್ಯ ಬಗ್ಗೆ ನಿರ್ಧಾರ ಕೈಗೊಳ್ಳುವ ಮಾಹಿತಿಯನ್ನು ಒಳಗೊಂಡಿದೆ.

ಈ ಮೂಲಕ 2036ರ ವೇಳೆಗೆ ದೇಶದಲ್ಲಿ ಜನಸಂಖ್ಯೆ 152.2 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದೆ.

Tags: