ಬೆಂಗಳೂರು : ಆರ್ಥಿಕ ತಜ್ಞೆ ಪೂನಂ ಗುಪ್ತಾ ಅವರು ಆರ್‌ಬಿಐ ಡೆಪ್ಯೂಟಿ ಗವರ್ನರ್ ಆಗಿ ಬುಧವಾರ ನೇಮಕಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆಯೂ ಆಗಿರುವ ಗುಪ್ತ ನ್ಯಾಷನಲ್ ಕೌನ್ಸಿನ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ವ್‌ನ ಮಹಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೊತೆಗೆ 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸದಸ್ಯೆರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ನಾಲ್ಕು ಡೆಪ್ಯೂಟಿ ಗವರ್ನರ್‌ಗಳನ್ನು ಹೊಂದಿರುವ ಆರ್‌ಬಿಐನಲ್ಲಿ ಇತ್ತೀಚೆಗೆ ಒಂದು ಹುದ್ದೆಯಿಂದ ನಿವೃತ್ತಿಯಾಗಿದ್ದ ಸ್ಥಳಕ್ಕೆ ಗುಪ್ತಾ ಅವರನ್ನು ನೇಮಕ ಮಾಡಲಾಗಿದೆ. ಅವರ ಅಧಿಕಾರ ಮೂರು ವರ್ಷ ಇರಲಿದೆ.



