ಉತ್ತರ ಪ್ರದೇಶ: ಸಾಮಾಜಿಕ ಮಾಧ್ಯಮದಲ್ಲಿ ಬಾಲಕಿಯ ಜೊತೆ ಗೆಳತನ ಬೆಳೆಸಿ, ಬಳಿಕ ಆಕೆಯನ್ನು ಅಪಹರಿಸಿ ಹಿಮಾಚಲ ಪ್ರದೇಶಕ್ಕೆ ಕರೆದೊಯ್ದು ಮೂರು ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರಂಜನ್ ವರ್ಮ, ಬಾಲಕಿಯು 15 ವರ್ಷದವರಾಗಿದ್ದು, ಆರೋಪಿಯು ಸಾಮಾಜಿಕ ಮಾಧ್ಯಮದಲ್ಲಿ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳಿಸಿ, ಕೆಲವು ದಿನಗಳ ನಂತರ ಆಕೆಯ ಗ್ರಾಮದಲ್ಲಿಯೇ ಭೇಟಿಯಾಗುವುದಾಗಿ ತಿಳಿಸಿ, ಭೇಟಿ ವೇಳೆ ಅಪಹರಿಸಿಕೊಂಡು ಹಿಮಾಚಲ ಪ್ರದೇಶಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾವಾರ ಎಸಗಿರುವುದಾಗಿ ತಿಳಿಸಿದರು.
ಆರೋಪಿಯನ್ನು ನೇಪಾಳದ ಪರ್ಸಾ ಜಿಲ್ಲೆಯ 26 ವರ್ಷದ ಯುವಕನಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದನು ಎಂದರು.
ಜನವರಿ 29 ರಂದು ಬಾಲಕಿ ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸಿ, ಬಳಿಕ ಆಕೆಯನ್ನು ರಕ್ಷಿಸಿ, ಗ್ರಾಮಕ್ಕೆ ಕರೆತರಲಾಗಿದೆ ಎಂದು ರಂಜನ್ ಹೇಳಿದ್ದಾರೆ.
ವಿವಿಧ ಸೆಕ್ಸನ್‌ಗಳಯಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.