Mysore
30
clear sky

Social Media

ಶನಿವಾರ, 07 ಫೆಬ್ರವರಿ 2026
Light
Dark

ಪ್ರತಿಪಕ್ಷಗಳು ದೇಶದ ಜನರ ನಿರ್ಧಾರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ ಮಾಡುತ್ತಿದೆ : ಮೋದಿ

ನವದೆಹಲಿ : ನವೆಂಬರ್‌ ೨೪ ರಂದು ನಾವು ಸಂವಿಧಾನ ದಿನ ಆಚರಿಸಲು ನಿರ್ಧರಿಸಿದ್ದಾಗ ಈಗ ಸಂವಿಧಾನದ ಪುಸ್ತಕ ಹಿಡಿದುಕೊಂಡು ಓಡಾಡುತ್ತಿರುವವರು ಅದನ್ನ ವಿರೋಧಿಸಿದ್ದರು ಎಂದು ರಾಜ್ಯ ಸಭೆಯಲ್ಲೂ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ ಪ್ರಧಾನಿ, ಸಂವಿಧಾನದ ಆಶಯ ನಮಗೆ ಅಮೂಲ್ಯ. ಸಂವಿಧಾನದ ಕಾರಣದಿಂದ ನನಗೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿತು. ಸಂವಿಧಾನವು ನಮಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ. ನಮ್ಮ ಸರ್ಕಾರ ೧೦ ವರ್ಷ ಪೂರೈಸಿದೆ. ಇನ್ನೂ ೨೦ ವರ್ಷ ಪೂರೈಸಬೇಕಿದೆ ಎಂದರು

ಅಲ್ಲದೆ ನಿರಂತರ ಸೇವೆಯೊಂದಿಗೆ ಮಾಡಿದ ಕೆಲಸವನ್ನು ಸಾರ್ವಜನಿಕರು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ.ದೇಶದ ಜನತೆ ಅಪಪ್ರಚಾರವನ್ನು ಸೋಲಿಸಿದ್ದಾರೆ. ವಿಶ್ವಾಸ ರಾಜಕಾರಣಕ್ಕೆ ಗೆಲುವಿನ ಮುದ್ರೆ ಹಾಕಿ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಪ್ರತಿಪಕ್ಷಗಳು ದೇಶದ ಜನರ ನಿರ್ಧಾರಕ್ಕೆ ಕಪ್ಪುಚುಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ವಿರೋಧ ಪಕ್ಷಗಳು ಪ್ರಧಾನಿ ಭಾಷಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರು. ರಾಜ್ಯಸಭೆಯನ್ನ ಮುಂದೂಡಿ, ಸುಳ್ಳು ಹೇಳೋದನ್ನ ನಿಲ್ಲಿಸಿ ಎಂದು ಒತ್ತಾಯಿಸಿ ರಾಜ್ಯಸಭೆಯಿಂದ ಹೊರನಡೆದರು.

Tags:
error: Content is protected !!