Mysore
32
overcast clouds

Social Media

ಭಾನುವಾರ, 29 ಮಾರ್ಚ್ 2026
Light
Dark

ವಾಜಪೇಯಿ ಜನ್ಮದಿನಕ್ಕೆ ಗಿಫ್ಟ್‌ ನೀಡಿದ ಪ್ರಧಾನಿ ಮೋದಿ: ದೇಶದ ಮೊದಲ ನದಿ ಜೋಡಣೆ ಯೋಜನೆಗೆ ಶಿಲಾನ್ಯಾಸ

ಭೂಪಾಲ್‌: ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆಯ ದಿನದಂದೇ ಅವರ ಬಹುದೊಡ್ಡ ಕನಸನ್ನು ಈಡೇರಿಸಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ.

ಮಧ್ಯಪ್ರದೇಶದ ಖಜ್ರಾಹೋದಲ್ಲಿ ಕೆನ್‌-ಬೆಟ್ಟಾ ನದಿಗಳ ಜೋಡಣೆಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರೆವೇರಿಸುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ನದಿಗಳ ಜೋಡಣೆಗೆ ಮುಂದಾಗಿದ್ದಾರೆ.

ಕಳೆದ 2014ರಲ್ಲಿ ಮೊದಲ ಬಾರಿಗೆ ಮೋದಿ ಅವರು ಪ್ರಧಾನಿ ಆದಾಗ ವಾಜಪೇಯಿ ಅವರ ಕನಸನ್ನು ಈಡೇರಿಸಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್‌ ಯಾದವ್‌ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು.

ಅಂತಿಮವಾಗಿ ನದಿಗಳ ಜೋಡಣೆಗಿದ್ದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿದ್ದು, ಈಗ ಕೇಂದ್ರದಿಂದ ಅನುದಾನವೂ ಮಂಜೂರಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಾ.ಮೋಹನ್‌ ಯಾದವ್‌, ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಚಿವ ಪ್ರಹ್ಲಾದ್‌ ಪಟೇಲ್‌, ಜಲಸಂಪನ್ಮೂಲ ಸಚಿವೆ ತುಳಸಿ ಸಿಲಾವತ್‌, ಕೃಷಿ ಸಚಿವ ಇಂದಲ್‌ ಸಿಂಗ್‌ ಕಂಸಾನಾ, ಕೇಂದ್ರ ಕೃಷಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಭಾಗಿಯಾಗಿದ್ದರು.

Tags:
error: Content is protected !!