ನವದೆಹಲಿ: ರಂಜಾನ್ ಮಾಸ ಇಂದಿನಿಂದ ಪ್ರಾರಂಭವಾಗಿದ್ದು, ದೇಶದ ಮುಸಲ್ಮಾನರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಂಜಾನ್ ಮಾಸ ಪ್ರಾರಂಭವಾಗಿದ್ದು, ನಮ್ಮ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ.
ಈ ಪವಿತ್ರ ತಿಂಗಳು ಆತ್ಮಾವಲೋಕನ, ಕೃತಜ್ಞತೆ ಹಾಗೂ ಭಕ್ತಿಯ ಮಹತ್ವವನ್ನು ಸಾರುತ್ತದೆ. ಅಲ್ಲದೇ ಕರುಣೆ, ದಯೆ ಹಾಗೂ ಸೇವೆಯ ಮೌಲ್ಯಗಳನ್ನು ನೆನಪಿಸುತ್ತದೆ ಎಂದು ರಂಜಾನ್ ಮುಬಾರಕ್ ಪೋಸ್ಟ್ ಮಾಡಿದ್ದಾರೆ.
ರಂಜಾನ್ ಮಾಸದ ಉಪವಾಸ ಆಚರಣೆಯ ಅರ್ಥವೇನು?
ರಂಜಾನ್ ತಿಂಗಳು ಮುಸಲ್ಮಾನರಿಗೆ ಅತ್ಯಂತ ಮಹತ್ವದ ತಿಂಗಳಾಗಿದೆ. ರಂಜಾನ್ ಅಲ್ಲಾಹನಿಂದ ದೊರೆತ ದೊಡ್ಡ ಇನಾಮು ಇದ್ದಂತೆ ಎಂದು ಹಲವಾರು ಹದಸುಗಳು ಇದರ ಮಹತ್ವವನ್ನು ಸಾರ ಹೇಳುತ್ತವೆ. ಇನ್ನು ಈ ತಿಂಗಳಲ್ಲಿ ಮುಖ್ಯವಾಗಿ ಉಪವಾಸವನ್ನು ಆಚರಿಸಲು ಧರ್ಮ ಗ್ರಂಥದಲ್ಲಿ ನಿರ್ದೇಶಿಸಲಾಗಿದೆ. ಅಲ್ಲದೇ ನಾವು ಉಪವಾಸವನ್ನು ಹೇಗೆ ಆಚರಿಸಬೇಕು ಎಂಬುದರ ಮಾಹಿತಿಯನ್ನು ವಿವರಿಸಲಾಗಿದೆ.





