Mysore
20
mist

Social Media

ಶುಕ್ರವಾರ, 02 ಜನವರಿ 2026
Light
Dark

ಕಾಂಗ್ರೆಸ್ಸೇತರ ನಾಯಕ ಮೂರನೇ ಅವಧಿಗೆ ಪ್ರಧಾನಿಯಾಗಿರುವುದನ್ನು ಸಹಿಸದ ವಿಪಕ್ಷಗಳು: ಪ್ರಧಾನಿ ಮೋದಿ

ನವದೆಹಲಿ: ದೇಶದ ಇತಿಹಾಸದಲ್ಲಿ ಕಾಂಗ್ರೆಸ್ಸೇತರ ನಾಯಕರೊಬ್ಬರು ಮೂರನೇ ಅವಧಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ವಿರೋಧ ಪಕ್ಷಗಳಲ್ಲಿನ ನಿರಾಸೆ, ಅಸಮಾಧಾನಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ (ಜುಲೈ.2) ಹೇಳಿದರು.

ಎನ್‌ಡಿಎ ನಾಯಕರೊಂದಿಗಿನ ಪ್ರಧಾನಿ ಮೋದಿ ಸಭೆಯಲ್ಲಿ ಹಿರಿಯ ನಾಯಕರಿಗೆ ನೀಡುವ ಗೌರವ, ಸದನದಲ್ಲಿ ಸದಸ್ಯರೊಂದಿಗೆ ನಡೆದುಕೊಳ್ಳು ಕೌಶಲ, ಹಿರಿಯರಿಂದ ಅನುಭವದ ವಿಷಯ ಗಳಿಸುವ ಬಗ್ಗೆಯೂ ಹೇಳಿರುವುದಾಗಿ ವರದಿಯಾಗಿದೆ.

ಇನ್ನು ಮಾಧ್ಯಮಗಳ ಜತೆಯಲ್ಲಿ ಮಾತನಾಡುವಾಗ ಅಥವಾ ಹೇಳಿಕೆ ಕೊಡುವ ಮುನ್ನಾ ಆ ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ತಮ್ಮ ಕ್ಷೇತ್ರದ ಮತದಾರರೊಂದಿಗೆ ಸಂಪರ್ಕದಲ್ಲಿರುವ ಮೂಲಕ ಮತದಾರರು ನೀಡಿದ ಬೆಂಬಲಕ್ಕೆ ಕೃತಜ್ಞತೆ ಅರ್ಪಿಸಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

Tags:
error: Content is protected !!