Mysore
20
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಚುನಾವಣೆಗೂ ಮುನ್ನ ಸಂವಿಧಾನ ಎಸೆಯಲು ಬಯಸಿದ್ದ ಪ್ರಧಾನಿ ಮೋದಿ: ರಾಹುಲ್‌

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಎಸೆಯಲು ಬಯಸಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ಪರಿಣಾಮ ಸಂವಿಧಾನಕ್ಕೆ ತಲೆಬಾಗಿದರು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಬಿಹಾರದ ಪಟ್ನಾದಲ್ಲಿ ಇಂದು ನಡೆದ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಂವಿಧಾನವನ್ನು ಎಸೆಯಲು ಬಯಸಿದ್ದ ಮೋದಿ ಅವರ ಉದ್ದೇಶ ನಮ್ಮ ಹೋರಾಟದಿಂದ ಸಾಧ್ಯವಾಗಲಿಲ್ಲ ಎಂದ ರಾಹುಲ್‌ ತಮ್ಮ ಭಾಷಣದುದ್ದಕ್ಕೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂವಿಧಾನ ಕೇವಲ ಪುಸ್ತಕವಲ್ಲ. ಅದು ದಲಿತರ, ಹಿಂದುಳಿದವರ, ಬಡವರ ಕಷ್ಟಗಳ ಬಗ್ಗೆ ಮಾತನಾಡುವ ಧ್ವನಿ ಎಂದು ಹೇಳಿದರು.

ದೇಶದಲ್ಲಿ ದಲಿತರು, ಒಬಿಸಿ ಹಾಗೂ ಅಲ್ಪಸಂಖ್ಯಾತರು ಶೇ.90ರಷ್ಟಿದ್ದಾರೆ. ಆದರೆ ಅವರು ಇಂದಿಗೂ ವ್ಯವಸ್ಥೆಯ ಒಳಗೆ ಬಂದಿಲ್ಲ. ಅವರು ವ್ಯವಸ್ಥೆಯಲ್ಲಿ ಭಾಗವಾಗಬೇಕು ಹೀಗಾಗಿ ನಾವೂ ಜಾತಿಗಣತಿಗೆ ಆಗ್ರಹಿಸುತ್ತಿದ್ದೇವೆ ಎಂದು ಹೇಳಿದರು.

ಸ್ವತಂತ್ರ್ಯ ಕುರಿತ ಮೋಹನ್‌ ಭಾಗವತ್‌ ಅವರ ಹೇಳಿಕೆಯು ಸಂವಿಧಾನ ವಿರೋಧಿಯಾಗಿದೆ ಎಂದು ಭಾಗವತ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

 

Tags:
error: Content is protected !!