Mysore
14
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕೇಂದ್ರ ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಮೊತ್ತ ವಿಸ್ತರಣೆ.?

ನವದೆಹಲಿ: ಇದೇ ಜುಲೈ.23ರಂದು ಮಂಡನೆ ಆಗಲಿರುವ ಕೇಂದ್ರ ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯ ಮೊತ್ತ ವಿಸ್ತರಿಸಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಬಜೆಟ್‌ ಮಂಡನೆ ಆಗಲು ಕೆಲವೇ ದಿನ ಬಾಕಿ ಇದೆ. ವಿವಿಧ ವಲಯಗಳ ನಿರೀಕ್ಷೆ ಹಲವಿದೆ. ಸರ್ಕಾರ ಆದ್ಯತೆ ಕೊಡಲಿರುವ ನಾಲ್ಕು ವರ್ಗಗಳೆಂದರೆ ಯುವಜನ, ಮಹಿಳೆ, ಕೃಷಿಕರು ಮತ್ತು ಶ್ರಮಿಕರು.

ಅನ್ನದಾತ ಎನಿಸಿರುವ ಕೃಷಿಕರ ಆದಾಯ ದ್ವಿಗುಣಗೊಳಿಸುವ ಸರ್ಕಾರದ ಗುರಿ ಇನ್ನೂ ಈಡೇರಿಲ್ಲ. 2019ರಲ್ಲಿ ಆರಂಭವಾದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಸುಮಾರು 10 ಕೋಟಿ ರೈತರನ್ನು ತಲುಪಿದೆ.

ಇದು ಇನ್ನೂ ಬಹಳಷ್ಟು ಸಣ್ಣ ರೈತರನ್ನು ತಲುಪಬೇಕಿದೆ. ಯೋಜನೆ ಅಡಿಯಲ್ಲಿ ಒಂದು ವರ್ಷದಲ್ಲಿ ನೀಡಲಾಗುತ್ತಿರುವ 6 ಸಾವಿರ ರೂ ಧನಸಹಾಯ ಸಾಲುವುದಿಲ್ಲ ಎನ್ನುವ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ಮೊತ್ತವನ್ನು 8000 ರೂಗೆ ಹೆಚ್ಚಿಸಬೇಕೆಂದು ಕೃಷಿ ತಜ್ಞರು ಸೇರಿದಂತೆ ಅನೇಕರು ಸಲಹೆ ನೀಡಿದ್ದಾರೆ. ಸರ್ಕಾರ ಕೂಡ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿವೆ. ಆದರೆ, ಈ ಬಜೆಟ್‌ನಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ಮೊತ್ತ ಹೆಚ್ಚಳ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ 2019ರಲ್ಲಿ ಆರಂಭವಾದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿಯಲ್ಲಿ ಜಮೀನು ಮಾಲೀಕತ್ವ ಹೊಂದಿರುವ ಕೃಷಿಕರಿಗೆ ಕೇಂದ್ರ ಸರ್ಕಾರ ಒಂದು ವರ್ಷದಲ್ಲಿ ತಲಾ ಎರಡು ಸಾವಿರ ರೂಗಳ ಮೂರು ಕಂತುಗಳಲ್ಲಿ ಒಟ್ಟು ಆರು ಸಾವಿರ ರೂ ಹಣವನ್ನು ಕೊಡುತ್ತದೆ.

ನೀವು ಸ್ವಂತ ಕೃಷಿ ಭೂಮಿ ಹೊಂದಿದ್ದರೆ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ನೊಂದಾಯಿಸಬಹುದು. ಆದರೆ, ನೀವು ಜನಪ್ರತಿನಿಧಿಯಾಗಿರಬಾರದು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ವೃತ್ತಪರ ಕೆಲಸದಲ್ಲಿ ಇರಬಾರದು. ಈ ಯೋಜನೆಗೆ ನೊಂದಾಯಿಸುವುದು ಬಹಳ ಸುಲಭ. ಆನ್‌ಲೈನ್‌ನಲ್ಲೇ ಮಾಡಬಹುದು ಅಥವಾ ನಿಮ್ಮ ಊರಿನ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿಯೂ ನೊಂದಾಯಿಸಬಹುದು.

 

Tags:
error: Content is protected !!