Mysore
20
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಅಹಮದಾಬಾದ್‌ | ಹಾಸ್ಟಲ್‌ ಮೇಲೆಯೇ ವಿಮಾನ ಪತನ

plane crash

ಹಲವು ಸಾವು-ನೋವು ಸಂಭವಿಸಿರುವ ಶಂಕೆ

ಅಹಮದಾಬಾದ್‌ : ಗುರುವಾರ ಮಧ್ಯಾಹ್ನ ಏರ್‌ಇಂಡಿಯಾದ AI-171 ವಿಮಾನವು ಹಾಸ್ಟಲ್‌ ಕಟ್ಟಡಕ್ಕೆ ಡಿಕ್ಕಿ ಹೊಡೆದ ಬಳಿಕ ಪತನಗೊಂಡಿದೆ. ಹಾಸ್ಟಲ್‌ ಕಟ್ಟಡದ ಟೆರೇಸ್‌ನಲ್ಲಿ ವಿಮಾನದ ಅವಶೇಷಗಳು ಬಿದ್ದಿರುವ ವಿಡಿಯೊ ದೃಶ್ಯಾವಳಿಗಳು ಎಲ್ಲೆಡೆ ಹರಿದಾಡುತ್ತಿವೆ.

ಗುಜರಾತ್‌ನ ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಟೇಕ್‌ ಆಫ್‌ ಆದ ಏರ್‌ ಇಂಡಿಯಾ ವಿಮಾನ ಲಂಡನ್‌ಗೆ ತೆರಳುತ್ತಿತ್ತು. ಟೇಕ್ ಆಫ್‌ ಆದ ಕೆಲ ಹೊತ್ತಿನಲ್ಲಿ ಈ ದುರಂತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸ್‌ ಸೇರಿದಂತೆ ರಕ್ಷಣಾ ತಂಡ ಆಗಮಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ.

ಇದನ್ನೂ ಓದಿ:- Plane crash | 825 ಅಡಿ ಎತ್ತರದಿಂದ ಪತನಗೊಂಡ ವಿಮಾನ.!

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಪತನಕ್ಕೆ ಕಾರಣ ಮತ್ತು ಪ್ರಯಾಣಿಕರ ಸ್ಥಿತಿಗತಿ ಬಗ್ಗೆ ಇನ್ನಷ್ಟೇ ವಿವರಗಳು ಲಭಿಸಬೇಕಿದೆ.

Tags:
error: Content is protected !!