ನವದೆಹಲಿ: ದೇವಾಲಯಗಳಲ್ಲಿ ವಿತರಿಸಲಾಗುವ ಪ್ರಸಾದ ಅಥವಾ ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ, ಈ ಪರೀಕ್ಷೆಯು ಸರ್ಕಾರದ ಕಾರ್ಯವ್ಯಾಪ್ತಿ ಭಾಗವಾಗಿದೆ ಎಂದು ಆದೇಶ ನೀಡಿದೆ.
ಸುಪ್ರೀಂಕೋರ್ಟ್‌ನಲ್ಲಿ ಇಂದು(ನ.29) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಕೆ.ವಿ.ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವೂ ಅರ್ಜಿಯಲ್ಲಿ ದಾಖಲಿಸಿದ ಮನವಿಯೂ ನೆಲದ ಅಸ್ತಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ ಬರುತ್ತದೆ. ಹೀಗಾಗಿ ಪ್ರಸ್ತುತ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಆದರೆ ಅರ್ಜಿದಾರರು ಬಯಸಿದರೆ ಈ ಅರ್ಜಿಯನ್ನು ಕಾನೂನಿನ ಅಡಿಯಲ್ಲಿ ಬರುವ ನಿಗಧಿತ ಸಂಸ್ಥೆಗೆ ಸಲ್ಲಿಸಬಹುದು ಎಂದು ತೀರ್ಪು ಪ್ರಕಟಿಸಿದೆ.
ಈ ಬಗ್ಗೆ ನವೆಂಬರ್ 26 ರಂದು ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಅರ್ಜಿದಾರರು ಈ ಅರ್ಜಿಯನ್ನು ವಿವಿಧ ದೇವಸ್ಥಾನಗಳಲ್ಲಿ ಅನ್ನಪ್ರಸಾದ ಅಥವಾ ಇತರೆ ಪ್ರಸಾದ ಸೇವಿಸಿದ ಬಳಿಕ ಜನರು ಅಸ್ವಸ್ತರಾಗುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.