ನವದೆಹಲಿ: ಭಯೋತ್ಪಾದನೆ ಸಂಪೂರ್ಣ ನಿಂತರೆ ಮಾತ್ರ ನೆರೆಯ ದೇಶ ಪಾಕಿಸ್ತಾನದೊಂದಿಗೆ ಶಾಂತಿ ಸಭೆ ನಡೆಸುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪಾಕ್ ಸೇರಿದಂತೆ ನೆರೆ ಹೊರೆಯ ದೇಶಗಳೊಂದಿಗೆ ಶಾಂತಿಯುತ ಸಂಬಂಧವನ್ನು ಬೆಳೆಸುವ ಭಾರತದ ಬದ್ಧತೆಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನದೊಂದಿಗೆ ಶಾಂತಿ ಮಾತುಕತೆ ಆಗಬೇಕು ಎಂದರೆ, ಭಾರತವನ್ನು ಗುರಿಯಾಗಿಸುವ ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಬೇಕು. ಆಗ ಮಾತ್ರ ಪಾಕಿಸ್ತಾನದೊಂದಿಗೆ ಶಾಂತಿ ಸಭೆ ನಡೆಸಲಾಗುವುದು ಎಂದು ಖಡಕ್ ಆಗಿ ಹೇಳಿದರು.
ನಾವು ಯಾವಾಗಲೂ ಶಾಂತಿಯುತವಾಗಿ ಬದುಕಲು ಇಷ್ಟ ಪಡುತ್ತೇವೆ. ನೆರೆ ಹೊರೆಯ ದೇಶಗಳೊಂದಿಗೆ ಉತ್ತಮ ಸಂಬಂಧ ಮುಂದುವರಿಸಿಕೊಂಡು ಹೋಗುತ್ತೇವೆ. ಆದರೆ ಭಯೋತ್ಪಾದನೆ ನಿಂತರಷ್ಟೇ ನಾವು ಪಾಕಿಸ್ತಾನದೊಂದಿಗೆ ಶಾಂತಿ ಸಭೆ ನಡೆಸಲು ಮುಂದಾಗುತ್ತೇವೆ ಎಂದರು.