Mysore
17
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಸಂಸತ್‌ ಭದ್ರತಾ ಲೋಪ ಪ್ರಕರಣ: ಮೈಸೂರಿನ ಮನೋರಂಜನ್‌ ಸಂಚುಕೋರ

ನವದೆಹಲಿ: 2023 ರ ಡಿಸೆಂಬರ್‌ 13 ರಂದು ಸಂಸತ್‌ನಲ್ಲಿ ನಡೆದ ಭದ್ರತಾ ಲೋಪ ಪ್ರಕರಣದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ಉಂಟು ಮಾಡಲು ಹಾಗೂ ಅಲ್ಪ ಸಮಯದಲ್ಲೇ ಜಾಗತಿಕ ಖ್ಯಾತಿ ಪಡೆಯಲು ಪ್ರಯತ್ನಿಸಿದ್ದರು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದಲ್ಲಿ ಮೈಸೂರಿನ ಡಿ.ಮನೋರಂಜನ್‌ ಪ್ರಕರಣದ ಪ್ರಮುಖ ಸಂಚುಕೋರ, ಉಳಿದವರಾದ ಲಲಿತ್‌ ಝಾ, ಅಮೋಲ್‌ ಶಿಂದೆ, ಮಹೇಶ್‌ ಕುಮಾವತ್‌, ಸಾಗರ ಶರ್ಮಾ ಮತ್ತು ನೀಲಂ ಆಜಾದ್‌ ಆರೋಪಿಗಳಾಗಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಅದನ್ನು ಬದಲಾಯಿಸಬೇಕು ಎಂಬ ಸಂದೇಶವನ್ನು ರವಾನಿಸಲು ಬಯಸಿದ್ದ ಆರೋಪಿಗಳು ಇದಕ್ಕಾಗಿ ತಮ್ಮ ಸಂಚನ್ನು ಕಾರ್ಯಗತಗೊಳಿಸಲು ಸುಮಾರು ಎರಡು ವರ್ಷ ತಯಾರಿ ನಡೆಸಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಎಲ್ಲಾ ಆರೋಪಿಗಳು ಸಾಮಾಜಿಕ ಜಾಲಾತಾಣದ ಮೂಲಕ ಪರಿಚಯವಾಗಿದ್ದರು. ಹೀಗೆ ಪರಿಚಯವಾಗಿದ್ದ ಅವರು ತಮ್ಮ ಉದ್ದೇಶವನ್ನು ಕಾರ್ಯಗತಗೊಳಿಸುವ ಮೊದಲ ಸಭೆಯನ್ನು ಮೈಸೂರಿನಲ್ಲೇ ನಡೆಸಿದ್ದರು. ಬಳಿಕ, ಗುರುಗ್ರಾಮ ಮತ್ತು ದೆಹಲಿಗಳಲ್ಲಿ ಸಭೆ ನಡೆಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಂಸತ್‌ ಮೇಲಿನ ದಾಳಿ ಪ್ರಕರಣದ 22ನೇ ವಾರ್ಷಿಕೋತ್ಸವದ ವೇಳೆ ಸಾಗರ್‌ ಶರ್ಮಾ ಮತ್ತು ಮನೋರಂಜನ್‌ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಸದಸದೊಳಗೆ ಜಿಗಿದಿದ್ದರು. ಘೋಷಣೆಗಳನ್ನು ಕೂಗುತ್ತಾ ಸ್ಮೋಕ್‌ ಕ್ಯಾನ್‌ ಹಾರಿಸಿ ದಾಂದಲೆ ಎಬ್ಬಿಸಿದ್ದರು. ಅದೇ ಸಮಯದಲ್ಲಿ ಸಂಸತ್‌ ಭವನದ ಹೊರಗೆ ಅಮೋಲ್‌ ಶಿಂಧೆ ಮತ್ತು ನೀಲಂ ಆಜಾದ್‌ ಬಣ್ಣದ ಹೊಗೆ ಹಾರಿಸಿ ಘೋಷಣೆ ಕೂಗಿದ್ದರು.

Tags:
error: Content is protected !!