Mysore
19
clear sky

Social Media

ಗುರುವಾರ, 29 ಜನವರಿ 2026
Light
Dark

ಮಕ್ಕಳು ಸಾಮಾಜಿಕ ಜಾಲತಾಣ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ

ನವದೆಹಲಿ: ಕೇಂದ್ರ ಸರ್ಕಾರದ ನೀತಿಯೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಖಾತೆ ತೆರೆಯಲು ಪೋಷಕರ ಅನುಮತಿ ಕಡ್ಡಾಯ ಎಂದು ತೀರ್ಮಾನಿಸಿದೆ.

ಈ ನೀತಿಗೆ ಕೇಂದ್ರ ಸರ್ಕಾರ 2023ರಲ್ಲೇ ಸಂಸತ್ತಿನ ಅನುಮೋದನೆ ಪಡೆದುಕೊಂಡು ಡಿಜಿಟಲ್‌ ಖಾಸಗಿ ಮಾಹಿತಿ ರಕ್ಷಣಾ ಕಾಯ್ದೆಗೆ ಕೆಲವೊಂದು ತಿದ್ದಪಡಿ ಮಾಡಿದೆ. ಅಲ್ಲದೇ ಹೊಸ ಕರಡು ವರದಿಯನ್ನು ಶುಕ್ರವಾರ(ಜ.4) ಬಿಡುಗಡೆ ಮಾಡಿದೆ.

ಇನ್ನು ಈ ಮಹತ್ವದ ನಿರ್ಧಾರದ ಬಗ್ಗೆ ಜನರು ಅಭಿಪ್ರಾಯಗಳನ್ನು ತಿಳಿಸಲು ಫೆಬ್ರವರಿ.18 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಹೀಗೆ ಸಂಗ್ರಹವಾಗುವ ಅಭಿಪ್ರಾಯಗಳನ್ನು ಆಧರಿಸಿದ ಬಳಿಕ ಅಂತಿಮ ವರದಿ ಬಿಡುಗಡೆಗೆ ಸರ್ಕಾರ ಮುಂದಾಗಿದೆ. ನಂತರ ಈ ಕರಡು ವರದಿ ಅನ್ವಯ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರಯಬೇಕಾದರೆ ಪೋಷಕರ ಅನುಮತಿ ಕಡ್ಡಾಯವಾಗಿದೆ. ಅದರೊಂದಿಗೆ ಕಂಪೆನಿಗಳು ತಮ್ಮ ದಾಖಲೆಗಳನ್ನು ಅಳಿಸುವಂತೆ ಹಾಗೂ ದಾಖಲೆಗಳನ್ನು ಯಾಕೆ ಕಲೆ ಹಾಕುತ್ತಿದ್ದೀರಿ ಎಂದು ಮಾಹಿತಿ ಪಡೆಯುವ ಹಾಗೂ ಖಾಸಗಿ ಮಾಹಿತಿ ರಕ್ಷಣೆ ಮಾಡಿಕೊಳ್ಳುವ ಅಧಿಕಾರ ಬಳಕೆದಾರನಿಗೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಂದು ವೇಳೆ ಕಂಪೆನಿಗಳು ಬಳಕೆದಾರನ ಡಾಟಾವನ್ನು ಲೀಕ್‌ ಮಾಡಿದ್ದಲ್ಲಿ, ಆಯಾಯ ಕಂಪೆನಿಗಳಿಗೆ 250 ರೂ. ದಂಡ ಹಾಕುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ.

Tags:
error: Content is protected !!