ವಾಷಿಂಗ್ಟನ್ : ಪಂಜಾಬ್‌ನ (Panjab) ಚಂಡೀಘಡದಲ್ಲಿ ನಡೆದ ಗ್ರೆನೇಡ್ ದಾಳಿ ಪ್ರಕರಣದ ಆರೋಪಿ ಉಗ್ರ ಹರ್‌ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಅಮೆರಿಕದ (America) ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್ ಬಂಧಿಸಿದೆ.
ಈ ಬಗ್ಗೆ ಸಾಮಾಜಾಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಅಮೆರಿಕ ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್ (ಎಫ್‌ಬಿಐ), ಹರ್‌ಪ್ರೀತ್ ಸಿಂಗ್‌ನನ್ನು ಶುಕ್ರವಾರ ಸ್ಯಾಕ್ರಮೆಂಡೊದಲ್ಲಿ ಬಂಧಿಸಲಾಗಿದೆ. ಎರಡು ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪುಗಳೊಂದಿಗೆ ನಂಟು ಹೊಂದಿದ್ದ ಹರ್‌ಪ್ರೀತ್, ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದನು. ಅಲ್ಲದೆ ಬಂಧನವನ್ನು ತಪ್ಪಿಸಿಕೊಳ್ಳಲು ಸಾಮಾನ್ಯ ಫೋನ್ ಬಳಕೆ ಮಾಡುತ್ತಿದ್ದನು ಎಂದು ಹೇಳಿದೆ.
ಇದನ್ನೂ ಓದಿ:- ನಂಜನಗೂಡು | ಆಸ್ತಿ ವಿಚಾರಕ್ಕೆ ಗಲಾಟೆ
ಪಂಜಾಬ್‌ನ ಚಂಡೀಘಡದಲ್ಲಿ ನಡೆದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್‌ಪ್ರೀತ್ ಸಿಂಗ್ ಅಲಿಯಾನ್ ಹ್ಯಾಪಿ ಪಾಸಿಯಾ ಸೇರಿದಂತೆ ಐವರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಇದನ್ನೂ ಓದಿ:- ಕೊಡಗು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ನಿರೀಕ್ಷೆ





