ನವದೆಹಲಿ: ಪಾಕಿಸ್ತಾನವು ವಶಕ್ಕೆ ಪಡೆದಿದ್ದ ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್ ಪೂರ್ಣಮ್ ಕುಮಾರ್ ಅವರನ್ನು ಇಂದು ಬಿಡುಗಡೆ ಮಾಡಿದೆ.
ಏಪ್ರಿಲ್.23ರಿಂದ ಪಾಕಿಸ್ತಾನದ ವಶದಲ್ಲಿದ್ದ ಬಿಎಸ್‌ಎಫ್ ಜವಾನ್ ಪೂರ್ಣಮ್ ಕುಮಾರ್ ಶಾ ಅವರನ್ನು ಇಂದು ಬೆಳಿಗ್ಗೆ 10.30ರ ಸುಮಾರಿಗೆ ಅಮೃತಸರದ ಅಟ್ಟಾರಿಯ ಜಂಟಿ ಚೆಕ್‌ಪೋಸ್ಟ್‌ನಲ್ಲಿ ಅಧಿಕೃತವಾಗಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ:- ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್.ಗವಾಯಿ ಪ್ರಮಾಣ ವಚನ ಸ್ವೀಕಾರ
ಏಪ್ರಿಲ್.23ರಂದು ಪಂಜಾಬ್‌ನ್ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಸೆಕ್ಟರ್‌ನಲ್ಲಿ ಬಿಎಸ್‌ಎಫ್‌ನ 182ನೇ ಬೆಟಾಲಿಯನ್ ಕಾನ್ಸ್‌ಸ್ಟೇಬಲ್ ಪೂರ್ಣಮ್ ಕುಮಾರ್ ಶಾ ಅವರು ಗಡಿ ಸಮೀಪದ ರೈತರಿಗೆ ರಕ್ಷಣೆ ನೀಡುವ ಕಿಸಾನ್ ಗಾರ್ಡ್ ಕರ್ತವ್ಯದಲ್ಲಿದ್ದಾಗ ತಪ್ಪಾಗಿ ಪಾಕಿಸ್ತಾನದ ಗಡಿಗೆ ದಾಟಿದರು.
ಈ ವೇಳೆ ಪಾಕ್ ರೇಂಜರ್‌ಗಳು ಅವರನ್ನು ಬಂಧಿಸಿದ್ದರು. ನಿನ್ನೆ ತಾನೇ ಅಧಂಪುರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಇಂದು ಯೋಧನನ್ನು ಬಿಡುಗಡೆಗೊಳಿಸಲಾಗಿದೆ.





