ನವದೆಹಲಿ: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಮೇ.10ರ ಮುಂಜಾನೆ ಆಪರೇಷನ್ ಸಿಂಧೂರ್‌ನ ಭಾಗವಾಗಿ ತಮ್ಮ ಪ್ರಮುಖ ವಾಯುನೆಲೆಗಳ ಮೇಲೆ ಭಾರತ ನಡೆಸಿದ ನಿಖರ ದಾಳಿಯನ್ನು ದೃಢಪಡಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇದು ಇತ್ತೀಚಿನ ನಾಲ್ಕು ದಿನಗಳ ಉಲ್ಬಣದ ಬಗ್ಗೆ ಅವರು ಮಾತನಾಡುವ ಮೊದಲ ವಿಡಿಯೋ ಆಗಿದೆ. ಶುಕ್ರವಾರ ಪಾಕಿಸ್ತಾನ ಸ್ಮಾರಕದಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಷರೀಫ್, ಭಾರತೀಯ ಕಾರ್ಯಾಚರಣೆ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರು ತಮ್ಮನ್ನು ಬೆಳಗಿನ ಜಾವ 2.30ಕ್ಕೆ ಎಬ್ಬಿಸಿದರು ಎಂದು ಹೇಳಿದರು.
ಮುನೀರ್ ಅವರು ಬೆಳಗಿನ ಜಾವ 2.30ಕ್ಕೆ ನನಗೆ ವೈಯಕ್ತಿಕವಾಗಿ ಕರೆ ಮಾಡಿ ದಾಳಿಯ ಬಗ್ಗೆ ಮಾಹಿತಿ ನೀಡಿದರು. ಇದು ತೀವ್ರ ಕಳವಳದ ಕ್ಷಣವಾಗಿತ್ತು ಎಂದು ಷರೀಫ್ ಇಸ್ಲಾಮಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿಯ ರಾಷ್ಟ್ರೀಯ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡು, ಈ ಘಟನೆಯನ್ನು ಆಪರೇಷನ್ ಸಿಂಧೂರ್‌ನ ಧೈರ್ಯ ಮತ್ತು ದಕ್ಷತೆಗೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.





