ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಪಾಕ್ ತನ್ನ ವಾಯುಪ್ರದೇಶ ಸಂಚಾರಕ್ಕೆ ಮುಕ್ತಗೊಳಿಸಿದೆ ಎಂದು ಘೋಷಣೆ ಮಾಡಿದೆ.
ಎಲ್ಲಾ ರೀತಿಯ ವಾಯು ಸಂಚಾರಕ್ಕೆ ತನ್ನ ವಾಯು ಪ್ರದೇಶವನ್ನು ಮುಕ್ತಗೊಳಿಸುವುದಾಗಿ ಪಾಕಿಸ್ತಾನ ಘೋಷಿಸಿದೆ.
ಭಾರತದೊಂದಿಗೆ ಕದನ ವಿರಾಮದ ನಂತರ ಪಾಕಿಸ್ತಾನವು ಸಾಮಾನ್ಯ ವಿಮಾನ ಕಾರ್ಯಾಚರಣೆಗಳಿಗಾಗಿ ವಾಯುಪ್ರದೇಶವನ್ನು ತೆರೆದಿದೆ.
ಭಾರತದೊಂದಿಗೆ ಉದ್ವಿಗ್ನತೆ ಕೊನೆಗೊಂಡಂತೆ ತೋರುತ್ತಿರುವಂತೆಯೇ ದೇಶವು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ ಈ ಘೋಷಣೆ ಮಾಡಿದೆ.
ಪಾಕಿಸ್ತಾನದ ವಾಯುಪ್ರದೇಶವನ್ನು ಎಲ್ಲಾ ರೀತಿಯ ವಿಮಾನಗಳಿಗೆ ಸಂಪೂರ್ಣವಾಗಿ ಪುನಃಸ್ಥಾಪಿಸಲಾಗಿದೆ ಹಾಗೂ ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಾಮಾನ್ಯ ವಿಮಾನ ಕಾರ್ಯಾಚರಣೆಗೆ ಲಭ್ಯವಿದೆ ಎಂದು ಹೇಳಿದೆ.





