Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಪಾಕಿಸ್ತಾನ: ಎರಡು ಪ್ರತ್ಯೇಕ ಬಸ್ ಅಪಘಾತದಲ್ಲಿ 37 ಮಂದಿ ಸಾವು

ಕರಾಚಿ: ಪಾಕಿಸ್ತಾನದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಸ್ ಅಪಘಾತದಿಂದ 37 ಮಂದಿ ಸಾವನ್ನಪ್ಪಿದ್ದಾರೆ.

11 ಯತ್ರಾರ್ಥಿಗಳು ಸಾವು

ಬಲೂಚಿಸ್ತಾನ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 29 ಮಂದಿ ಮೃತಪಟ್ಟು, 35 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

70 ಮಂದಿ ಯತ್ರಾರ್ಥಿಗಳಿದ್ದ ಬಸ್‌, ಇರಾನಿನಿಂದ ಪಂಜಾಬ್‌ ಪ್ರಾಂತ್ಯಕ್ಕೆ ಕರೆತರುತ್ತಿತ್ತು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

26 ಮಂದಿ ಸಾವು

35 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಾಕ್ ಆಕ್ರಮಿತ ಕಾಶ್ಮೀರದ ಬಳಿ ಕಂದಕಕ್ಕೆ ಉರುಳಿದ ಪರಿಣಾಮ 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಖಾಸಗಿ ಅಂಬ್ಯುಲೆನ್ಸ್ ಸೇವೆ ನಡೆಸುತ್ತಿರುವ ಈಧಿ ಪೌಂಡೇಶನ್ ನ ಕಮರ್ ನದೀಮ್ ತಿಳಿಸಿದ್ದಾರೆ.

ಸ್ಥಳೀಯರು ಬಸ್ ನಿಂದ ಮೃತ ದೇಹಗಳನ್ನು ಹೊರ ತೆಗೆಯುತ್ತಿದ್ದು, ಪೊಲೀಸರು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ತೆರಳಿವೆ, ಮೃತರಲ್ಲಿ ಮಕ್ಕಳು ಮಹಿಳೆಯರು ಮತ್ತು ಪುರುಷರು ಸೇರಿದ್ದಾರೆ ಎಂದು ಸಾಧೋನತಿ ಡಾ.ಸಿ ಉಮರ್ ಫಾರುಕ್ ಹೇಳಿದ್ದು, ಮೃತರೆಲ್ಲರು ಸಾಧೋನತಿ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದು ಬಂದಿದೆ.

Tags: