ನವದೆಹಲಿ: ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯಲ್ಲಿಂದು ಪಹಲ್ಗಾಮ್ ದಾಳಿ ಬಗ್ಗೆ ಮಾತನಾಡಿದ್ದಾರೆ.
ದೇಶದ ಸೈನಿಕರು ಮತ್ತು ಸೇನೆಯ ಶೌರ್ಯಕ್ಕೆ ನಮಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ ಪ್ರಿಯಾಂಕಾ ಗಾಂಧಿ ಅವರು, ರಕ್ಷಣಾ ಸಚಿವರ ಭಾಷಣದಲ್ಲಿ ಒಂದು ವಿಷಯ ನನಗೆ ಬೇಸರ ತರಿಸಿದೆ ಎಂದರು. ರಕ್ಷಣಾ ಸಚಿವರು ಎಲ್ಲದರ ಬಗ್ಗೆ ಮಾತನಾಡಿದರು. ದೇಶದ ಬಗ್ಗೆಯೂ ಮಾತನಾಡಿದರು. ಇತಿಹಾಸದ ಬಗ್ಗೆಯೂ ಪಾಠ ಹೇಳಿದರು. ಆದರೆ ಪಹಲ್ಗಾಮ್ ದಾಳಿ ಹೇಗೆ ಮತ್ತು ಏಕೆ ನಡೆಯುತು ಎಂಬುದನ್ನು ಹೇಳಲಿಲ್ಲ ಎಂದು ಹೇಳಿದರು.
ಜನರು ಸರ್ಕಾರವನ್ನು ನಂಬಿ ಪಹಲ್ಗಾಮ್‌ಗೆ ಹೋಗಿದ್ದರು. ಸರ್ಕಾರ ಅವರನ್ನು ದೇವರ ಕರುಣೆಗೆ ಬಿಟ್ಟಿತು. ಈ ದಾಳಿ ನಡೆಯಲು ಯಾರು ಹೊಣೆ? ನಾಗರಿಕರ ಸುರಕ್ಷತೆಯು ರಕ್ಷಣಾ ಸಚಿವರ ಜವಾಬ್ದಾರಿಯಲ್ಲವೇ, ಅದು ಗೃಹ ಸಚಿವರ ಜವಾಬ್ದಾರಿಯಲ್ಲವೇ ಎಂದು ಸರ್ಕಾರವನ್ನು ಕಟುವಾಗಿ ಪ್ರಶ್ನೆ ಮಾಡಿದ್ದಾರೆ.





