Mysore
25
clear sky

Social Media

ಗುರುವಾರ, 22 ಜನವರಿ 2026
Light
Dark

Padma Awards ; ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ಹೊಸದಿಲ್ಲಿ : 2025ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆಯಿತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಖ್ಯಾತ ನಟರಾದ ನಂದಮೂರಿ ಬಾಲಕೃಷ್ಣ, ಅಜಿತ್‌ ಕುಮಾರ್‌, ಶೇಖರ್‌ ಕಪೂರ್‌, ಅರಿಜಿತ್‌ ಸಿಂಹ್‌ ಮತ್ತು ರಿಕಿ ಕೇಜ್‌ ಅವರಂತಹ ಸೆಲಿಬ್ರಿಟಿಗಳು ಮುರ್ಮು ಅವರಿಂದ ಪ್ರಶಸ್ತು ಸ್ವೀಕರಿಸಿದರು.

ಕರ್ನಾಟಕದ ಆಂಕೊಲಾಜಿಸ್ಟ್‌ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರಪತಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಪದ್ಮ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ:

ದಿವಂಗತ ಗಾಯಕ ಪಂಕಜ್ ಉದಾಸ್- ಪದ್ಮಭೂಷಣ
ಕನ್ನಡದ ನಟ ಅನಂತ್ ನಾಗ್- ಪದ್ಮಭೂಷಣ
ಪೀಟೀಲು ವಾದಕ ಲಕ್ಷ್ಮಿ ನಾರಾಯಣ್‌ -ಪದ್ಮವಿಭೂಷಣ
ದಿವಂಗತ ಒಸಾಮ ಸುಜುಕಿ -ಪದ್ಮವಿಭೂಷಣ
ಸುಶೀಲ್‌ ಕುಮಾರ್‌ ಮೋದಿ – ಪದ್ಮವಿಭೂಷಣ
ಶ್ರೀಜೇಶ್‌ ಪಿ.ಆರ್‌ – ಪದ್ಮವಿಭೂಷಣ

ನಟ ಅಶೋಕ್ ಲಕ್ಷ್ಮಣ್ ಸರಾಫ್- ಪದ್ಮಶ್ರೀ
ನಟನಾ ತರಬೇತುದಾರ, ರಂಗ ನಿರ್ದೇಶಕ ಬ್ಯಾರಿ ಗಾಡ್ಫ್ರೇ ಜಾನ್-ಪದ್ಮಶ್ರೀ
ಗಾಯಕ ಜಸ್ಪಿಂದರ್ ನರುಲಾ- ಪದ್ಮಶ್ರೀ
ಗಾಯಕಿ ಅಶ್ವಿನಿ ಭಿಡೆ-ದೇಶಪಾಂಡೆ-ಪದ್ಮಶ್ರೀ
ಜಾನಪದ ಗಾಯಕ ಭೇರು ಸಿಂಗ್ ಚೌಹಾಣ್-ಪದ್ಮಶ್ರೀ
ಭಕ್ತಿ ಗಾಯಕ ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ-ಪದ್ಮಶ್ರೀ
ಜಾನಪದ ಸಂಗೀತಗಾರ ಜೋಯ್ನಾಚರಣ್ ಬಠಾರಿ-ಪದ್ಮಶ್ರೀ
ಶಾಸ್ತ್ರೀಯ ಗಾಯಕಿ ಕೆ ಓಮನಕುಟ್ಟಿ ಅಮ್ಮ-ಪದ್ಮಶ್ರೀ
ಗಾಯಕ ಮಹಾಬೀರ್ ನಾಯಕ್ – ಪದ್ಮಶ್ರೀ
ಮಮತಾ ಶಂಕರ್ – ಪದ್ಮಶ್ರೀ

Tags:
error: Content is protected !!