ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿ ಕ್ಷಣವೂ ಕೆಂಡ ಕಾರುತ್ತಿದ್ದ ಕಾಂಗ್ರೆಸ್‍ನ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಅಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಶ್ಲಾಘನೆ ಮಾಡಿ ಗಮನ ಸೆಳೆದಿದ್ದಾರೆ.
ನಾಗರೀಕರ ಮೇಲೆ ದಾಳಿ ನಡೆಸದೆ ಕೇವಲ ಉಗ್ರರ ನೆಲೆಗಳನ್ನು ಅಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಚರಣೆಯನ್ನು ಜಾಗರೂಕ ಹಾಗೂ ಅಗತ್ಯ ನಡೆ ಎಂದು ಅವರು ಗುಣಗಾನ ಮಾಡಿದ್ದಾರೆ.
ಇದನ್ನೂ ಓದಿ:- ಬ್ರಹ್ಮೋಸ್ ದಾಳಿಗೆ ಬೆಚ್ಚಿ ಕದನ ವಿರಾಮ ಮಾಡಿಸಿದ್ದ ಪಾಕ್
ಉಗ್ರರ ನೆಲೆ ನಾಶಗೊಳಿಸಿದ ನಂತರ ಮುಂದೆ ಯುದ್ಧ ಬೇಡ ಎಂಬ ಮೋದಿ ನಡೆಯನ್ನು ಅವರು ಜಾಗರೂಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.





