ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧವೇ ಭುಗಿಲೆದ್ದ ಆಕ್ರೋಶ
80 ಲಕ್ಷ ಜನರಿಂದ ನೋ ಕಿಂಗ್ಸ್ ಚಳುವಳಿ
ಟ್ರಂಪ್ ನೀತಿ ವಿರೋಧಿಸಿ ಬೀದಿಗಿಳಿದ ದೊಡ್ಡ ಸಮೂಹ
ಅಮೇರಿಕಾದ ದೊಡ್ಡ ದೊಡ್ಡ ನಗರಗಳಲ್ಲಿ ಸಮಾವೇಶ
ಆಕ್ರೋಶಕ್ಕೆ ಕಾರಣವಾದ ಡೊನಾಲ್ಡ್ ಟ್ರಂಪ್ ನೀತಿಗಳು
ಫ್ಯಾಸಿಸಂ ವಿರುದ್ಧ ಹೋರಾಡಿ ಎಂಬ ಬ್ಯಾನರ್ ಪ್ರದರ್ಶಿಸಿ ಮೆರವಣಿಗೆ
ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಈಗ ಅಮೇರಿಕಾದಲ್ಲಿ ಆಕ್ರೋಶ ಭುಗಿಲೆದ್ದಿದೆ.
ಇರಾನ್ ವಿರುದ್ಧ ಯುದ್ಧ ಸೇರಿದಂತೆ ಟ್ರಂಪ್ ಅವರ ಎಲ್ಲಾ ನೀತಿಗಳನ್ನು ವಿರೋಧಿಸಿ ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ನೋ ಕಿಂಗ್ಸ್ ಚಳುವಳಿಯ ಭಾಗವಾಗಿ ದೇಶದಾದ್ಯಂತ ಪ್ರತಿಭಟನಾಕಾರರು ರ್ಯಾಲಿ ನಡೆಸಿ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್, ವಾಷಿಂಗ್ಟನ್, ಲಾಸ್ ಏಂಜನೀಸ್, ಡಲ್ಲಾಸ್, ಪಿಲಡೆಲ್ಪಿಯಾ ಸೇರಿದಂತೆ ಅನೇಕ ನಗರಗಳಲ್ಲಿ ದೊಡ್ಡ ಸಭೆಗಳು, ಪ್ರತಿಭಟನಾ ರ್ಯಾಲಿಗಳು ನಡೆದಿವೆ.





