Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮಾಜಿ ಅಗ್ನಿವೀರರನ್ನು ಸಿಎಪಿಎಫ್‌ನಲ್ಲಿ ನೇಮಕಕ್ಕೆ ಆದೇಶ

ನವದೆಹಲಿ : ಮಾಜಿ ಅಗ್ನಿವೀರರಿಗೆ ಸಿಎಪಿಎಫ್‌ನಲ್ಲಿ ನೇಮಕ ಮಾಡಿಕೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಸಿಐಎಸ್‌ಎಫ್‌ನ ಡಿಜಿ ನಿನಾ ಸಿಂಗ್‌, ಮಾಜಿ ಅಗ್ನಿವೀರರನ್ನು ಸೆಂಟ್ರಲ್‌ ಆರ್ಮಡ್‌ ಪೊಲೀಸ್‌ ಫೋರ್ಸ್‌ ನಲ್ಲಿ ಕಾಂಸ್ಟೇಬಲ್‌ ದರ್ಜೆಗೆ ನೇಮಿಸಿಕೊಳ್ಳಲು ಕೇಂದ್ರ ಗೃಹ ಇಲಾಖೆ ಸಚಿವರು ಆದೇಶ ಹೊರಡಿಸಿರುವುದಾಗಿ ತಿಳಿಸಿದರು.

ಈ ಹುದ್ದೆಗೆ ಅಗ್ನಿವೀರರಿಗಾಗಿ ಶೇ 10% ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಹುದ್ದೆಗೆ ನೇಮಕವಾಗುವ ಅಗ್ನಿ ವೀರರಿಗೆ ದೇಹದಾಡ್ಯ ಪರೀಕ್ಷೆಯಲ್ಲಿ ಕೊಂಚ ಸಡಿಲಿಕೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

Tags: