ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಡಬೇಕಾದ 960 ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದೆ.
ಕೇಂದ್ರದಿಂದ ಬಿಡುಗಡೆಯಾದ ಅನುದಾನದಲ್ಲಿ ಶೇ 75ರಷ್ಟು ವೆಚ್ಚವಾದ ಬಳಿಕ ರಾಜ್ಯ ಸರ್ಕಾರ ಕೇಂಧ್ರಕ್ಕೆ ಹಣ ಬಳಕೆ ಪ್ರಮಾಣಪತ್ರ ಸಲ್ಲಿಸುತ್ತದೆ. 960ಕೋಟಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿದ್ದರೂ ಅನುದಾನ ಬಿಡುಗಡೆ ಯಾಗಿಲ್ಲ. ಶೀಘ್ರ ಅನುದಾನ ಬಿಡಿಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ಇಲಾಖೆಯು ಕೇಂದ್ರಕ್ಕೆ ಪತ್ರ ಬರೆದಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಾರ್ಮಿಕರಿಗೆ ಕೂಲಿ ನೀಡಲು 11,553 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕೇಂದ್ರ ಸರ್ಕಾರವು 4,987 ಕೋಟಿ ಹಾಗೂ ರಾಜ್ಯ ಸರ್ಕರವು 1,311 ಕೋಟಿ ಭರಿಸಿವೆ.
2022-23 ರಲ್ಲಿ 12.57 ಕೋಟಿ ಹಾಗೂ 2023-24 ರಲ್ಲಿ 13.84 ಕೋಟಿ ಮಾನವ ಕೂಲಿ ದಿನಗಳನ್ನು ಸೃಜಿಸಲಾಗಿತ್ತು. ಈ ಸಾಲಿನಲ್ಲಿ 11.68 ಕೋಟಿ ಕೂಲಿ ದಿನಗಳನ್ನು ಸೃಜಿಸಲಾಗಿದೆ.





